ನೀಲ ಸಮುದ್ರದ ಆಳದಲ್ಲಿ ಮೀನುಗಳೊಂದಿಗೆ ಗೋಲ್ಡನ್ ಸ್ಟಾರ್ `ಚಮಕ್’

ಕಾರವಾರ: ಗೋಲ್ಡನ್ ಸ್ಟಾರ್ ಗಣೇಶ್ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದು, ಅದರ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಗಣೇಶ್ ಸದ್ಯ ಚಮಕ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದು, ಚಿತ್ರೀಕರಣ ಉತ್ತರ ಕನ್ನಡ ಜಿಲ್ಲೆಯ ರಮಣೀಯ ಸ್ಥಳಗಳಲ್ಲಿ ನಡೆಯುತ್ತಿದೆ.

ಶೂಟಿಂಗ್ ನಿಂದ ಬಿಡುವು ಮಾಡಿಕೊಂಡ ಗಣೇಶ್ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರ್ಡೇಶ್ವರದಲ್ಲಿನ ನೇತ್ರಾಣಿ ಸ್ಕೂಬಾ ಡೈವಿಂಗ್, ಕುಮಟಾದ ನುಶಿಕೋಟೆ, ಗೋಕರ್ಣದ ಹಿರೇಗುತ್ತಿ ಹಾಗೂ ಶನಿವಾರ ಕಾರವಾರದ ಪ್ರಸಿದ್ದ ತೀಳ್‍ಮಾತಿ ಕಡಲತೀರದಲ್ಲಿ ಸಿನಿಮಾದ ಶೂಟಿಂಗ್ ನಡೆದಿದೆ. ಈ ರಮಣೀಯ ಸ್ಥಳಗಳಲ್ಲಿ ಎರಡು ರೋಮ್ಯಾಂಟಿಕ್ ಹಾಡುಗಳ ಚಿತ್ರೀಕರಣ ನಡೆದಿದ್ದು, ಶೂಟಿಂಗ್ ಸೆರೆ ಹಿಡಿಯಲು ಡ್ರೋನ್ ಕ್ಯಾಮೆರಾವನ್ನು ಬಳಸಲಾಗಿದೆ.

ಮುಗುಳುನಗೆ ಸಿನಿಮಾದ ಯಶಸ್ಸಿನ ನಂತರ ಗಣೇಶ್ `ಚಮಕ್’ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಗಣೇಶ್ ಗೆ ನಾಯಕಿಯಾಗಿ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಶನಿವಾರ ಸಿನಿಮಾದ ಶೂಟಿಂಗ್ ಮುಗಿಸಿಕೊಂಡ ಗಣೇಶ್ ಇಂದು ಬೆಂಗಳೂರಿಗೆ ಮರಳಿ ಬಂದಿದ್ದಾರೆ.

 

Comments

Leave a Reply

Your email address will not be published. Required fields are marked *