Gold Smuggling Case| ರನ್ಯಾ ರಾವ್‌ ಮನೆಯಲ್ಲಿ ಸಿಕ್ಕಿದ್ದೇನು? – ಅತೀ ದೊಡ್ಡ ಕಾರ್ಯಾಚರಣೆ ಎಂದ DRI

ಬೆಂಗಳೂರು: ನಟಿ ರನ್ಯಾ ರಾವ್‌ (Ranya Rao) ಮನೆ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ದಾಳಿ ನಡೆಸಿ 17.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.

ದಾಳಿಯ ಸಂದರ್ಭದಲ್ಲಿ 2.67 ಕೋಟಿ ರೂ. ನಗದು, 2.06 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ 17.29 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಇದೊಂದು ಅತೀ ದೊಡ್ಡ ಕಾರ್ಯಾಚರಣೆ ಎಂದು ಮಾಧ್ಯಮ ಹೇಳಿಕೆ ಹೇಳಿಕೆ ಬಿಡುಗಡೆ ಮಾಡಿದೆ. ಇದನ್ನೂ ಓದಿ: 40 ಬಾರಿ ದುಬೈಗೆ ಹೋಗಿದ್ದ ರನ್ಯಾ ಅಧಿಕಾರಿಗಳ ಬಲೆಗೆ ಬಿದ್ದಿದ್ದೆ ರೋಚಕ

ಖೈದಿ ನಂ 2198:
14.2 ಕೆಜಿ ಚಿನ್ನ ಕಳ್ಳಸಾಗಾಟದಲ್ಲಿ ಜೈಲು ಸೇರಿದ್ದ ನಟಿ ರನ್ಯಾ ರಾವ್‌ಗೆ ಜೈಲಾಧಿಕಾರಿಗಳು ವಿಚಾರಣಾಧೀನ ಖೈದಿ ಸಂಖ್ಯೆ ನೀಡಿದ್ದಾರೆ.

ಮಂಗಳವಾರ 14 ದಿನಗಳ ಕಾಲ ಮಾರ್ಚ್ 18 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದ್ದರು. ಕಳೆದ ರಾತ್ರಿಯೇ ರನ್ಯಾ ರಾವ್‌ ಅವಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಿಡಲಾಗಿತ್ತು.

ಇಂದು ವಿಚಾರಣಾಧೀನ ಕೈದಿ ನಂಬರ್ (UTP) ನೀಡಿರುವ ಜೈಲಾಧಿಕಾರಿಗಳು ಇನ್ಮುಂದೆ ನಟಿ ರನ್ಯಾ ಜೈಲಿನಲ್ಲಿ ಇರುವವರೆಗೂ ಇದೇ 2198 /25 ಎಂದೇ ಕರೆಯಲಾಗುತ್ತದೆ.