ಏರಿಕೆಯಾಗುತ್ತಿದ್ದ ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ

ನವದೆಹಲಿ: ಕೆಲ ದಿನಗಳಿಂದ ಭಾರೀ ಏರಿಕೆ ಕಾಣುತ್ತಿದ್ದ ಚಿನ್ನದ (Gold) ಮತ್ತು ಬೆಳ್ಳಿಯ ದರ ಈಗ ದಿಢೀರ್‌ ಇಳಿಕೆಯಾಗಿದೆ.

ಇಂದು 24 ಕ್ಯಾರೆಟ್ ಚಿನ್ನದ ಬೆಲೆ 1,740 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 1,600 ರೂ. ಕಡಿಮೆಯಾಗಿದೆ.  ಶುಕ್ರವಾರ ಬೆಂಗಳೂರಿನಲ್ಲಿ  10 ಗ್ರಾಂ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 91,640 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 84,000 ರೂ.ಗೆ ಇಳಿಕೆಯಾಗಿದೆ.

ಗುರುವಾರ 10 ಗ್ರಾಂ 24 ಕ್ಯಾರೆಟ್ ಬೆಲೆ 93,380 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 85,600 ರೂ. ಆಗಿತ್ತು. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಔಷಧ, ತಾಮ್ರ, ಸೆಮಿಕಂಡಕ್ಟರ್‌ಗಳಿಗೆ ವಿನಾಯ್ತಿ, ಆಟೋಮೊಬೈಲ್, ಸ್ಟೀಲ್, ಚಿನ್ನಾಭರಣಗಳಿಗೆ ಬರೆ

ಪ್ರತಿ ಕೆಜಿ ಬೆಳ್ಳಿಯ (Silver) ಬೆಲೆ 4,000 ರೂ.ಗಳಷ್ಟು ಕಡಿಮೆಯಾಗಿದ್ದು 1 ಕೆಜಿ ಬೆಳ್ಳಿಗೆ 99,900 ರೂ. ದರವಿದೆ.

ದರ ಇಳಿಕೆ ಯಾಕೆ?
ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತೆರಿಗೆ ಸಮರ (Tax War) ಆರಂಭಿಸಿದ ಬಳಿಕ ಹೂಡಿಕೆದಾರರಿಗೆ ಭಾರೀ ನಷ್ಟವಾಗುತ್ತಿದೆ. ಹೀಗಾಗಿ ಈ ನಷ್ಟವನ್ನು ಸರಿದೂಗಿಸಲು ಚಿನ್ನದ ಮೇಲೆ ಹೂಡಿಕೆ ಮಾಡಿರುವ ಹೂಡಿಕೆದಾರರು ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ

ಅಂತರರಾಷ್ಟ್ರೀಯ ಮಾರುಕಟ್ಟೆ ದರಗಳು, ಆಮದು ಸುಂಕಗಳು, ತೆರಿಗೆಗಳು ಮತ್ತು ವಿನಿಮಯ ದರಗಳಲ್ಲಿನ ಏರಿಳಿತಗಳು ಪ್ರಾಥಮಿಕವಾಗಿ ಭಾರತದಲ್ಲಿ ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರುತ್ತವೆ. ಈ ಅಂಶಗಳು ಒಟ್ಟಾಗಿ ದೇಶಾದ್ಯಂತ ದೈನಂದಿನ ಚಿನ್ನದ ದರಗಳನ್ನು ನಿರ್ಧರಿಸುತ್ತವೆ.