ದೇಗುಲಕ್ಕೆ 8 ಕೋಟಿ ಮೌಲ್ಯದ ನೋಟುಗಳಿಂದ ಅಲಂಕಾರ – ಗೋಡೆ, ನೆಲದಲ್ಲೆಲ್ಲ ನೋಟಿನ ದರ್ಬಾರ್

ಹೈದರಾಬಾದ್: ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳಿಗೆ ಚಿನ್ನದ ಆಭರಣಗಳನ್ನು ತೊಡಿಸುವುದು ಹೊಸದೇನಲ್ಲ. ಆದರೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನಲ್ಲಿರುವ (Visakhapatnam) 135 ವರ್ಷಗಳಷ್ಟು ಹಳೆಯದಾದ ವಾಸವಿ ಕನ್ಯಕಾ ಪರಮೇಶ್ವರಿ (Vasavi Kanyaka Parameswari) ದೇವಿಯ ದೇವಾಲಯದಲ್ಲಿ ಕರೆನ್ಸಿ ನೋಟುಗಳನ್ನು ಗೋಡೆಗಳ ಮೇಲೆ ಮತ್ತು ನೆಲದ ಮೇಲೆ ಅಂಟಿಸುವ ಮೂಲಕ ಅಲಂಕಾರ ಮಾಡಿರುವ ಅಪರೂಪದ ದೃಶ್ಯ ಕಂಡು ಬಂದಿದೆ.

ನವರಾತ್ರಿ (Navratri) ಮತ್ತು ದಸರಾ (Dussehra) ವೇಳೆ ದೇವಾಲಯಕ್ಕೆ ಮಾಡಲಾಗಿರುವ ಈ ಅಲಂಕಾರವು 8 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ದೇವಾಲಯಗಳಲ್ಲಿ ಈ ರೀತಿಯ ಅಲಂಕಾರಗಳನ್ನು ಮಾಡುವುದು ಹೆಚ್ಚಾಗಿದೆ. ಇದನ್ನೂ ಓದಿ: ಪಂಜಾಬ್ ಸಿಎಂ ಬೆಂಗಾವಲಿಗೆ 42 ಕಾರು- ವಿಐಪಿ ಸಂಸ್ಕೃತಿ ಎಂದು ಕಾಂಗ್ರೆಸ್ ಕಿಡಿ

ಈ ಕುರಿತಂತೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ದೇವಾಲಯ ಸಮಿತಿಯು, ಇದು ಸಾರ್ವಜನಿಕರಿಂದ ಬಂದಿರುವ ಕಾಣಿಕೆಯಾಗಿದ್ದು, ಒಂಬತ್ತು ದಿನಗಳ ಪೂಜೆ ಬಳಿಕ ಹಣವನ್ನು ಅವರಿಗೆ ಹಿಂತಿರುಗಿಸಲಾಗುತ್ತದೆ. ಈ ಹಣವು ದೇವಾಲಯದ ಟ್ರಸ್ಟ್‌ಗೆ ಸೇರುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಪುಣ್ಯಸ್ಮರಣೆ – ತಂದೆಯ ಸಮಾಧಿಗೆ ಹೆಲಿಕಾಪ್ಟರ್‌ನಲ್ಲಿ ಪುಷ್ಪಾರ್ಚನೆ ಮಾಡಿಸಿದ ಮಗ

ನೋಟುಗಳಿಂದ ಮಾಡಿದ ಬಂಟಿಂಗ್ಸ್‍ಗಳನ್ನು ಮರಗಳ ಮೇಲೆ ಮತ್ತು ಸೀಲಿಂಗ್ ಮೇಲೆ ಅಂಟಿಸಿರುವುದನ್ನು ಕಾಣಬಹುದಾಗಿದೆ. ಈ ದೇವಾಲಯವು ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡ ಪಟ್ಟಣದಲ್ಲಿದೆ. ಈ ದೇವಾಲಯದ ಕೇಂದ್ರ ದೇವತೆ, ವಾಸವಿ ಕನ್ಯಕಾ ದೇವಿಯಾಗಿದೆ. ಈ ಹಿಂದೆ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಅಲಂಕಾರವನ್ನು ದೇವಾಲಯಕ್ಕೆ ಮಾಡಲಾಗಿತ್ತು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *