ಬಂಗಾರದ ಆಸೆ ತೋರಿಸಿ ಹಣ ದೋಚಿದವರು ಅರೆಸ್ಟ್ – 19 ಲಕ್ಷ ನಗದು ವಶ

ಕಾರವಾರ: ಜಿಲ್ಲೆಯ ಮುಂಡಗೋಡಿನಲ್ಲಿ ಕಡಿಮೆ ಬೆಲೆಗೆ ಬಂಗಾರ ಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ, ಶಿವಮೊಗ್ಗ ಜಿಲ್ಲೆಯ ಆರು ಜನರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನವೂ ಸೇರಿ 19 ಲಕ್ಷ ನಗದನ್ನು ಮುಂಡಗೋಡು ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ವಿರೇಶ್ ತೀರ್ಥಪ್ಪ, ವೆಂಕಟೇಶ್ ಸಣ್ಣವೀರಪ್ಪ, ಕುಮಾರ್ ಗದಿಗಪ್ಪ, ತೀರ್ಥಪ್ಪ ಹಸಿಗಪ್ಪ, ವಿದ್ಯಾದರ, ಸಾಗರದ ಸುಭಾಷ್ ನಗರದ ಪ್ರಶಾಂತ್ ವಿರೇಶ್ ಬಂಧಿತ ಆರೋಪಿಗಳು. ಬಂಧಿತರು ಜೂ.16 ರಂದು ಮುಂಡಗೋಡು ತಾಲೂಕಿನ ಮಳಗಿ ಗ್ರಾಮದ ಧರ್ಮ ಜಲಾಶಯದ ಬಳಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶಿವನಗೌಡ ಮಾದೇಗೌಡ ಪಾಟೀಲ್ ಎಂಬವರಿಗೆ ನಕಲಿ ಬಂಗಾರ ತೋರಿಸಿ ಅವರಿಂದ ಹಣ ಪಡೆದು ಪರಾರಿಯಾಗಿದ್ದರು. ಇದನ್ನೂ ಓದಿ: ಮಾತನಾಡುವುದಾಗಿ ವಂಚಿಸಿ ಮೊಬೈಲ್ ಜೊತೆ ಎಸ್ಕೇಪ್ ಆಗಿದ್ದವನಿಗೆ ಬಿತ್ತು ಗೂಸಾ

ಈ ಬಗ್ಗೆ ಮುಂಡಗೊಡು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‍ಪಿ ರವಿ ನಾಯ್ಕ ನೇತೃತ್ವದಲ್ಲಿ, ಸಿಪಿಐ ಪ್ರಭುಗೌಡ, ಪಿಎಸ್‍ಐ ಬಸವರಾಜ್ ಸಿಬ್ಬಂದಿ ವಿನೋದ್, ಶರತ್ ಧರ್ಮರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಆತ್ಮಾಹುತಿ ಬಾಂಬ್ ದಾಳಿ- ಮೂವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

Comments

Leave a Reply

Your email address will not be published. Required fields are marked *