ಬಾಂಗ್ಲಾದಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – 4.24 ಕೋಟಿ ರೂ. ಮೌಲ್ಯದ ಚಿನ್ನ ವಶ

(ಸಾಂದರ್ಭಿಕ ಚಿತ್ರ)

ಕೋಲ್ಕತ್ತಾ: ಚಿನ್ನ ಕಳ್ಳಸಾಗಾಟ (Smuggling) ಮಾಡುತ್ತಿದ್ದ ಬಾಂಗ್ಲಾದೇಶದ (Bangladesh) ನಿವಾಸಿಗಳನ್ನು ಗಡಿ ಭದ್ರತಾ ಪಡೆ ಪಶ್ಚಿಮ ಬಂಗಾಳದ (West Bengal) ಉತ್ತರ 24 ಪರಗಣ ಜಿಲ್ಲೆಯ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ಪೆಟ್ರಾಪೋಲ್‌ನಲ್ಲಿ ಬಂಧಿಸಿ 4.24 ಕೋಟಿ ರೂ. ಮೌಲ್ಯದ 52 ಚಿನ್ನದ ಬಿಸ್ಕತ್ತುಗಳನ್ನು (Gold Biscuit) ವಶಪಡಿಸಿಕೊಂಡಿದ್ದಾರೆ.

ಬಿಎಸ್‌ಎಫ್ (BSF) ಅಧಿಕಾರಿಗಳ ಪ್ರಕಾರ ಆರೋಪಿ ಬಸ್ ಚಾಲಕನನ್ನು ಮುಸ್ತಫಾ ಎಂದು ಗುರುತಿಸಲಾಗಿದ್ದು, ಆತನ ಸಹಾಯಕನನ್ನು ಮತ್ತೂರ್ ರೆಹಮಾನ್ ಅಕಂಡಾ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬಾಂಗ್ಲಾದೇಶದ ನಿವಾಸಿಗಳಾಗಿದ್ದು, ರಾಯಲ್ ಫ್ರೆಂಡ್‌ಶಿಪ್ ಇಂಟರ್‌ನ್ಯಾಷನಲ್ ಪ್ಯಾಸೆಂಜರ್ ಬಸ್ ಮೂಲಕ ಬಾಂಗ್ಲಾದೇಶದಿಂದ ಭಾರತಕ್ಕೆ ಚಿನ್ನ ಸಾಗಾಟ ಮಾಡುತ್ತಿದ್ದರು. ಕಳ್ಳಸಾಗಾಣಿಕೆಯ ಸುಳಿವು ದೊರೆತ ಗಡಿ ಭದ್ರತಾ ಪಡೆಯು ಕಾರ್ಯಾಚರಣೆಗೆ ಇಳಿದಿದ್ದು, ಅಕ್ರಮ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಉಗ್ರರ ಜೊತೆ ಸ್ಥಳೀಯರ ಶಾಮೀಲು – ಜಮ್ಮು ಕಾಶ್ಮೀರದಲ್ಲಿ 15 ಕಡೆ ಎನ್‍ಐಎ ಶೋಧ

ಬಸ್ ಅಗರ್ತಾಲದಿಂದ ಢಾಕಾ ಮೂಲಕ ಕೋಲ್ಕತ್ತಾಗೆ ತೆರಳುತ್ತಿತ್ತು. ಐಸಿಪಿ ಪೆಟ್ರಾಪೋಲ್ ತಲುಪಿದ ಸಂದರ್ಭ ಬಿಎಸ್‌ಎಫ್‌ನ ಭದ್ರತಾ ತಂಡ ಬಸ್ ಅನ್ನು ಕೂಲಂಕುಷವಾಗಿ ಪರೀಶೀಲಿಸಿದ್ದಾರೆ. ಈ ವೇಳೆ ಬಸ್‌ನ ಇಂಧನ ಟ್ಯಾಂಕ್‌ನ ಪಕ್ಕದಲ್ಲಿರುವ ಟೊಳ್ಳಾದ ಪೈಪ್‌ನಲ್ಲಿ 6,950 ಗ್ರಾಂ ತೂಕದ 52 ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಚಿನ್ನದ ಬಿಸ್ಕತ್‌ಗಳ ಅಂದಾಜು ಮೌಲ್ಯ 4 ಕೋಟಿ 24 ಲಕ್ಷ ರೂ.ಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅರೆಸ್ಟ್‌

ಬಂಧಿತ ಆರೋಪಿಗಳು ಹಾಗೂ ವಶಪಡಿಸಿಕೊಂಡ ಚಿನ್ನದ ಬಿಸ್ಕತ್ತುಗಳನ್ನು ಕೋಲ್ಕತ್ತಾದ (Kolkata) ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (DRI) ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಎಸ್‌ಎಫ್‌ನ ಕಾರ್ಯಾಚರಣೆಯ ಕುರಿತು ಡಿಜಿ (DG) ಸಂತೋಷ ವ್ಯಕ್ತಪಡಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದವರಿಗೆ ನಗದು ಬಹುಮಾನ ಘೋಷಿಸಿದ್ದಾರೆ. ಇದನ್ನೂ ಓದಿ: ಪಿಎಫ್‍ಐ ವಿರುದ್ಧದ ಪ್ರಕರಣ – ತಮಿಳುನಾಡಿನ ಹಲವೆಡೆ ಎನ್‍ಐಎ ದಾಳಿ