ಮಗಳ ಮದುವೆಗೆ ಕೂಡಿಟ್ಟಿದ್ದ ಚಿನ್ನ, ಹಣ ಕೊನೆಗೂ ಪತ್ತೆ!

– ಮಣ್ಣಿನಡಿ ಸಿಲುಕಿತ್ತು ಮಾಂಗಲ್ಯ ಸರ

ಮಡಿಕೇರಿ: ಭೂಕುಸಿತಕ್ಕೆ ಸಿಲುಕಿ ಮನೆಯೇ ಧರೆಗುರುಳಿದ ಪರಿಣಾಮ ಮಗಳ ಮದುವೆಗೆ ಕೂಡಿಟ್ಟ ಚಿನ್ನ, ಹಣ ಹಾಗೂ ಬಟ್ಟೆಗಳು ಮಣ್ಣುಪಾಲಾಗಿದ್ದು, ಕೊನೆಗೂ ಅವುಗಳು ಮನೆ ಮಾಲೀಕನ ಕೈ ಸೇರಿದೆ.

ಭೂ ಕುಸಿತವಾದ ಪರಿಣಾಮ ಮನೆ ಸಂಪೂರ್ಣ ಕುಸಿದು ಬಿದ್ದಿತ್ತು. ಹೀಗಾಗಿ ಮಗಳ ಮದುವೆಗಾಗಿ ಇಟ್ಟಿದ್ದ ಚಿನ್ನ ಹಾಗೂ ಹಣವನ್ನು ಬುಧವಾರದಿಂದ ಅಪ್ಪ-ಅಮ್ಮ ಹುಡುಕಾಡಿದ್ದು, ಇದೀಗ ಮನೆಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಮಗಳ ಮದ್ವೆಗಾಗಿ ಕೂಡಿಟ್ಟ ಹಣ, ಚಿನ್ನಕ್ಕಾಗಿ ಮನೆಯ ಅವಶೇಷದಡಿ ಹುಡುಕಾಟ!

ಹಟ್ಟಿಹೊಳೆಯ ಉಮೇಶ್ ಶೆಟ್ಟಿ ದಂಪತಿಯ ಹಿರಿಯ ಪುತ್ರಿ ನವ್ಯಾ ಶೆಟ್ಟಿಯ ಮದುವೆ ಇದೇ ತಿಂಗಳು 30 ರಂದು ಫಿಕ್ಸ್ ಆಗಿದೆ. ಗುಡ್ಡ ಕುಸಿತದಿಂದ ಮನೆ ಕುಸಿದು ಹೋಗಿತ್ತು. ಪರಿಣಾಮ ಮಗಳ ಮದುವೆಗೆಂದು ಚಿನ್ನ, ಹಣ ಹಾಗೂ ಬಟ್ಟೆಬರೆಗಳನ್ನು ತುಂಬಿದ್ದ ಬೀರು ಮಣ್ಣಿನಡಿ ಸಿಲುಕಿತ್ತು. ಇದನ್ನು ಹೊರತೆಗೆಯಲು ಉಮೇಶ್ ಹಾಗೂ ಸ್ಥಳೀಯರು ಹರಸಾಹಸಪಟ್ಟಿದ್ದರು. ಕಡೆಗೆ ಶಾಸಕ ಅಪ್ಪಚ್ಚು ರಂಜನ್ ಜೆಸಿಬಿ ಕಳುಹಿಸಿ ಬೀರು ತೆಗಿಸಿದ್ರು. ಇದನ್ನೂ ಓದಿ: ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು

ಮಗಳ ಎಲ್ಲಾ ಚಿನ್ನ ಸಿಕ್ಕಿದೆ:
ದೇವರು ಎಲ್ಲವನ್ನು ಕಳೆದುಕೊಂಡು ಇಷ್ಟನ್ನಾದ್ರೂ ಕೊಟ್ಟಿದ್ದಾನಲ್ಲ ಅಂತ ಸ್ವಲ್ಪ ಸಮಾಧಾನವಾಯಿತು. ಮಗಳ ಮದುವೆಯಾದ್ರೂ ಚೆನ್ನಾಗಿ ಮಾಡೋಣ ಅಂತ ಇದ್ದೇವೆ. ತುಂಬಾ ಚೆನ್ನಾಗಿ ಮಾಡಕ್ಕಾಗಲ್ಲ. ಹೀಗಾಗಿ ದೇವಸ್ಥಾನದಲ್ಲಿ ಧಾರೆಯೆರೆದು ಮದುವೆ ಮಾಡಿಕೊಡುವುದಾಗಿ ನಿರ್ಧರಿಸಿದ್ದೇವೆ. ಒಡವೆ ಸಿಕ್ಕಿದೆ. ಆದ್ರೆ 15 ಸಾವಿರದಷ್ಟು ಹಣ ಸಿಗಬೇಕಷ್ಟೆ. ನನ್ನದೊಂದು ಉಂಗುರವನ್ನು ಬೇರೆಯೇ ಒಂದು ಪರ್ಸ್ ನಲ್ಲಿಟ್ಟಿದ್ದೆ. ಅದು ಕೂಡ ಈವಾಗ ಕಾಣ್ತಿಲ್ಲ. ಅದು ಈಗಾಗಲೇ ಮಣ್ಣಿನೊಳಗೆ ಹೋಗಿರಬಹುದು. ಹೀಗಾಗಿ ಆ ಉಂಗುರ ಸಿಗಲ್ಲ ಅನಿಸತ್ತೆ. ಒಟ್ಟಿನಲ್ಲಿ ಮಗಳ ಮದುವೆಗೆ ಇಟ್ಟಿರುವ ಎಲ್ಲಾ ಚಿನ್ನ ಸಿಕ್ಕಿದೆ ಅಂತ ಉಮೇಶ್ ಪತ್ನಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಒಡವೆ, ಹಣದ ಜೊತೆಗೆ ಮಕ್ಕಳ ಶಾಲಾ ಅಂಕಪಟ್ಟಿ, ಪ್ರಮಾಣಪತ್ರಗಳು ಕೂಡ ಪತ್ತೆಯಾಗಿದೆ. ಇದನ್ನೂ ಓದಿ: ಅನ್ನಾಹಾರವಿಲ್ಲದೇ ಕುಸಿದ ಮನೆಯನ್ನೇ ಕಾವಲು ಕಾಯುತ್ತಿದೆ ಶ್ವಾನ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *