ಕರೊನಾ ಆತಂಕ-ಗೋವಾದಲ್ಲಿ ಆಗಸ್ಟ್ 30ರ ವರೆಗೆ ಕರ್ಫ್ಯೂ ಮುಂದುವರಿಕೆ

ಕಾರವಾರ/ಪಣಜಿ: ಗೋವಾ ರಾಜ್ಯದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಕಾಲಾವಧಿಯನ್ನು ಆಗಸ್ಟ್ 30ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದ ಗಡಿ ಭಾಗದ ಕಾರವಾರದ ಮಾಜಾಳಿ-ಗೋವಾ ಭಾಗದಲ್ಲೂ ಪ್ರವಾಸಿಗರಿಗೆ ನಿರ್ಬಂಧಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ.

ಗೋವಾದ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ಮೂಲಕ ಚಿತ್ರಮಂದಿರ ತೆರೆಯಲು ಅನುಮತಿ ನೀಡಲಾಗಿದೆ. ಗೋವಾ ರಾಜ್ಯದಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಮಾರ್ಚ್ ತಿಂಗಳಿಂದ ಜಾರಿಗೊಂಡಿದ್ದ ಕರ್ಫ್ಯೂ ವನ್ನು ಹಂತ ಹಂತವಾಗಿ ಅವಧಿ ವಿಸ್ತರಣೆ ಮಾಡಲಾಗುತ್ತಿದೆ. ಗೋವಾದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಇಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರಗಳ ಕಾಲ ಕರ್ಫ್ಯೂ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ನಾಸಾದ ಪ್ರಶಸ್ತಿಗೆ ಸಿದ್ದಾಪುರದ ವಿದ್ಯಾರ್ಥಿ ದಿನೇಶ್ ವಸಂತ ಹೆಗಡೆ ಆಯ್ಕೆ

ಕೇರಳದಿಂದ ಆಗಮಿಸುವ ಪ್ರವಾಸಿಗರಿಗೆ ಗೋವಾ ರಾಜ್ಯ ಪ್ರವೇಶಿಸಲು ಆರ್‍ ಟಿಪಿಆರ್ ನೆಗೆಟಿವ್ ವರದಿ ಖಡ್ಡಾಯಗೊಳಿಸಲಾಗಿದ್ದು, ಇತರ ರಾಜ್ಯಗಳಿಂದ ಗೋವಾಕ್ಕೆ ಆಗಮಿಸುವ ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಖಡ್ಡಾಯವಾಗಿದೆ.

ಕಾರವಾರದಿಂದ ಗೋವಾಕ್ಕೆ ಪ್ರತಿದಿನ ತೆರಳುವ ವಾಹನ ಹಾಗೂ ಉದ್ಯೋಗಿಗಳಿಗೂ ಈ ನಿಯಮ ಜಾರಿ ಮಾಡಲಾಗಿದ್ದು, ಇದೀಗ ಪ್ರತಿ ದಿನ ತೆರಳುವ ಜನರಿಗೂ ಸಹ ತೊಂದರೆಯಾಗುತ್ತಿದೆ. ಇದನ್ನೂ ಓದಿ: ಕೋವಿಡ್ ಮಾರ್ಗಸೂಚಿ ಕೇಂದ್ರ ಸಚಿವರಿಗೆ ಅನ್ವಯವಾಗುವುದಿಲ್ಲವೇ..?: ರಾಮಲಿಂಗಾ ರೆಡ್ಡಿ

 

Comments

Leave a Reply

Your email address will not be published. Required fields are marked *