ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್ ಹೈಕಮಾಂಡ್‍ನಿಂದ ಡಿಕೆಶಿಗೆ ಟಾಸ್ಕ್

ಬೆಂಗಳೂರು: ಪಂಚ ರಾಜ್ಯಗಳ ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಾಸ್ಕ್ ನೀಡಿದೆ.

ಮಾರ್ಚ್ 10ರಂದು ಗೋವಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಡಿ.ಕೆ. ಶಿವಕುಮಾರ್‍ಗೆ ಇಂದು ಸಂಜೆ ಗೋವಾಕ್ಕೆ ತೆರಳಲು ಸೂಚನೆ ನೀಡಿದೆ.

ಸೋಮವಾರ ಸಂಜೆ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳು ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರಿಗೆ ಗೋವಾಗೆ ಹೋಗಲು ಸೂಚನೆ ನೀಡಲಾಗಿದೆ.

ಗೋವಾ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಬರುವವರೆಗೆ ಅಲ್ಲೇ ಇರಬೇಕು. ಫಲಿತಾಂಶ ಅತಂತ್ರವಾಗಿ ಅದರ ಲಾಭ ಪಡೆಯುವ ಅವಕಾಶವಿದ್ದರೆ ಅದನ್ನು ಬಳಸಿಕೊಂಡು ಪಕ್ಷ ಅಧಿಕಾರಕ್ಕೆ ತರಲು ಬೇಕಾದ ಪ್ರಯತ್ನ ಮಾಡಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಪಡೆಗೆ ಸೇರಿದ ತಮಿಳುನಾಡಿನ ಯುವಕ

ಇದು ಡಿಕೆಶಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಿದ ಮತ್ತೊಂದು ಟಾಸ್ಕ್ ಆಗಿದ್ದು, ಗೋವಾ ಉಸ್ತುವಾರಿಯ ಜವಾಬ್ದಾರಿಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆಯೇ ಡಿ.ಕೆ ಶಿವಕುಮಾರ್ ಇಂದು ಸಂಜೆಯೇ ಗೋವಾಗೆ ತೆರಳಲಿದ್ದಾರೆ. ಡಿಕೆಶಿ ಜೊತೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿಗೂ ಜವಾಬ್ದಾರಿ ವಹಿಸಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ, ಪಂಜಾಬ್‌ನಲ್ಲಿ ಆಪ್‌ – ಯಾವ ಸಮೀಕ್ಷೆ ಏನು ಹೇಳಿವೆ?

ಈ ಹಿಂದೆ ಗೋವಾ ಕಾಂಗ್ರೆಸ್ ನಾಯಕರಿಂದ ದೇವರ ಮೇಲೆ ಆಣೆ ಮಾಡಿಸಲಾಗಿತ್ತು. ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಪಕ್ಷದ ಅಭ್ಯರ್ಥಿಗಳು ಆಣೆ ಪ್ರಮಾಣ ಮಾಡಿದ್ದರು. ಈಗ ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಟೈಟ್ ಫೈಟ್ ಇರುವ ಹಿನ್ನಲೆ ಅಧಿಕಾರ ಹಿಡಿಯಲು ಕಾಂಗ್ರೆಸ್ ತಯಾರಿ ನಡೆಯುತ್ತಿದೆ.

ಸಮೀಕ್ಷೆಗಳು ಏನು ಹೇಳಿವೆ?
ಒಟ್ಟು ಸ್ಥಾನಗಳು 40, ಬಹುಮತಕ್ಕೆ 21
ಇಂಡಿಯಾ ಟುಡೇ
ಬಿಜೆಪಿ 14-18, ಕಾಂಗ್ರೆಸ್+ 15 -20, ಆಪ್ 0, ಟಿಎಂಸಿ 2-5, ಇತರರು 0-4

ರಿಪಬ್ಲಿಕ್
ಬಿಜೆಪಿ 13-17, ಕಾಂಗ್ರೆಸ್+ 13-17, ಆಪ್ 2-6, ಟಿಎಂಸಿ 2-4, ಇತರರು 0-4

ಟೈಮ್ಸ್ ನೌ
ಬಿಜೆಪಿ 14, ಕಾಂಗ್ರೆಸ್+ 16, ಆಪ್ 0, ಟಿಎಂಸಿ 0, ಇತರರು 10

ಜನ್ ಕೀ ಬಾತ್
ಬಿಜೆಪಿ 14-19, ಕಾಂಗ್ರೆಸ್+ 13-19, ಆಪ್ 2-1, ಟಿಎಂಸಿ 5-2 ಇತರರು 1-3

2017 ಫಲಿತಾಂಶ
ಕಾಂಗ್ರೆಸ್ 17, ಬಿಜೆಪಿ 13, ಆಪ್ 0, ಇತರರು 10

Comments

Leave a Reply

Your email address will not be published. Required fields are marked *