ಬಿಜೆಪಿ ಕಾರ್ಯಕರ್ತರೇ ನನಗೆ ಬೆಂಬಲ ನೀಡಲಿಲ್ಲ: ಗೆದ್ದ ಬಿಜೆಪಿ ಅಭ್ಯರ್ಥಿ ಬೇಸರ

ಪಣಜಿ: ಬಿಜೆಪಿ ಕಾರ್ಯಕರ್ತರು ನನಗಾಗಿ ಕೆಲಸ ಮಾಡಿಲ್ಲ ಎಂದು ಪಣಜಿ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಅಟಾನಾಸಿಯೊ ಮಾನ್ಸರಾತ್ (Atanasio Monserrate) ಬೇಸರ ವ್ಯಕ್ತಪಡಿಸಿದ್ದಾರೆ.

ಮತ ಏಣಿಕೆ ಕೇಂದ್ರದ ಹೊರಗೆ ಗೆಲುವು ಖಾತ್ರಿಯಾಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲಿತಾಂಶಕ್ಕೆ ಸಂಬಂಧಿಸಿದಂತೆ ನಿರಾಶೆಯಾಗಿದೆ. ಬಿಜೆಪಿ ಕಾರ್ಯಕರ್ತರು ನನಗಾಗಿ ಕೆಲಸ ಮಾಡಿಲ್ಲ. ಆಪ್ ಅಭ್ಯರ್ಥಿಗಾಗಿ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಗೋವಾ ಮಾಜಿ ಸಿಎಂ ಪುತ್ರ ಸೋಲು

ನಾನು ಕಾಂಗ್ರೆಸ್ ವಿರುದ್ಧ ಹೋರಾಡಿದೆ. ಕೆಲವು ಕಾರ್ಯಕರ್ತರು, ಬೆಂಬಲಿಗರ ಬಲದಿಂದಾಗಿ ನಾನು ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ನಾನು ಈ ಫಲಿತಾಂಶವನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾನು ಎರಡು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದೇನೆ. ಬಿಜೆಪಿ ಕಾರ್ಯಕರ್ತರು ನನ್ನನ್ನು ಪಕ್ಷದವನೆಂದು ಇನ್ನೂ ಸ್ವೀಕರಿಸಿಲ್ಲ. ಪಕ್ಷವು ಮೊದಲ ದಿನದಿಂದ ಏನೂ ಮಾಡಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ

ಬಿಜೆಪಿ ಕಾರ್ಯಕರ್ತರು ನನ್ನನ್ನು ಪಕ್ಷದವನೆಂದು ಇನ್ನೂ ಒಪ್ಪಿಕೊಂಡಿಲ್ಲ ಎಂದು ನನಗೆ ಅನ್ನಿಸುತ್ತದೆ. ಉತ್ಪಲ್‌ ಪರಿಕ್ಕರ್‌ ಇಷ್ಟು ಮತಗಳನ್ನು ಪಡೆಯಲು ಸಾಧ್ಯವಾದರೆ, ಕಾರ್ಯಕರ್ತರು ತಮ್ಮ ಮತಗಳನ್ನು ಅವರಿಗೆ ವರ್ಗಾಹಿಸಿದ್ದಾರೆ. ಇಲ್ಲಿಗೆ ಬಿಜೆಪಿ ನಾಯಕತ್ವವು ಡ್ಯಾಮೆಜ್ ಕಂಟ್ರೋಲ್ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 12 ಸಾವಿರ ರಷ್ಯಾ ಸೈನಿಕರ ಸಾವು – 20 ಲಕ್ಷ ಉಕ್ರೇನಿಯನ್ನರು ಪಲಾಯನ

 

Comments

Leave a Reply

Your email address will not be published. Required fields are marked *