ಮತದಾನದ ದಿನದಂದು ಸಾರ್ವಜನಿಕ ರಜೆ ಘೋಷಿಸಿದ ಗೋವಾ ಸರ್ಕಾರ

ಪಣಜಿ: ರಾಜ್ಯದಲ್ಲಿ ಫೆಬ್ರವರಿ 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನದ ದಿನದಂದು ಗೋವಾ ಸರ್ಕಾರ ಸಾರ್ವಜನಿಕ ರಜೆ ಘೋಷಿಸಿದೆ.

ಗೋವಾ ಸರ್ಕಾರವು 2022ರ ಫೆಬ್ರವರಿ 14ರಂದು (ಮಾಘ 25, ಶಕ 1943) ಸೋಮವಾರ ಗೋವಾ ಸಾರ್ವತ್ರಿಕ ಚುನಾವಣೆ (ಮತದಾನದ ದಿನ) ಇರುವುದರಿಂದ ಗೋವಾ ರಾಜ್ಯಾದ್ಯಂತ “ಸಾರ್ವಜನಿಕ ರಜಾದಿನ” ಎಂದು ಘೋಷಿಸಲಾಗುತ್ತದೆ. ಇದನ್ನೂ ಓದಿ: 99 ವರ್ಷದ ವೃದ್ಧೆಯನ್ನೂ ಬಿಡದ ಪಾಪಿ – ಹಿಡನ್ ಕ್ಯಾಮೆರಾದಲ್ಲಿ ಕ್ರೌರ್ಯ ಸೆರೆ!

ಸಾರ್ವಜನಿಕ ರಜೆಯನ್ನು ಎಲ್ಲಾ ಸರ್ಕಾರಿ/ಖಾಸಗಿ ಸಂಸ್ಥೆಗಳಿಗೆ ವೇತನ ಸಹಿತ ರಜೆ ನೀಡಬೇಕು ಎಂದು ರಾಜ್ಯ ಸರ್ಕಾರವು ನಿರ್ದೇಶಿಸಿದೆ. ಗೋವಾದಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 332 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ಈ ವರ್ಷ ಗೋವಾ ವಿಧಾನಸಭಾ ಚುನಾವಣೆಗೆ ಒಟ್ಟು 587 ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸಲಾಗಿದ್ದು, ಗೋವಾದಲ್ಲಿ ಫೆಬ್ರವರಿ 14 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ತಂದೆ ಎನ್ನುವುದನ್ನು ನೋಡದೆ ಕೇವಲ 900 ರೂ. ಆಸೆಗೆ ಕೊಂದೇ ಬಿಟ್ಟ!

Comments

Leave a Reply

Your email address will not be published. Required fields are marked *