ಹುಬ್ಬಳ್ಳಿ: ತಂದೆಗಾಗಿ ಪುಟ್ಟ ಕಂದಮ್ಮ ಮಮ್ಮಲ ಮರುಗುವ ಮನಕಲಕುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಕುಡಿದು ಬಿದ್ದ ತಂದೆಯನ್ನು ಎಬ್ಬಿಸಲು ಮಗುವೊಂದು ನಾನಾ ಪ್ರಯತ್ನ ನಡೆಸಿದೆ. ಆದರೆ ಇದನ್ನು ನೋಡಿದ ಜನರು ಮಗುವಿನ ಸಹಾಯಕ್ಕೆ ಬರಲಿಲ್ಲ. ಮಾನವೀಯತೆ ಮರೆತು ಆ ಮಗುವಿನ ನೋವನ್ನು ನೋಡುತ್ತಾ ನಿಂತಿದ್ದರು.

ತಂದೆ ಹಾಗೂ ಮಗಳು ಭಿಕ್ಷಾಟನೆಗಾಗಿ ಹುಬ್ಬಳ್ಳಿಗೆ ಬಂದಿದ್ದರು. ಭಿಕ್ಷಾಟನೆಯ ಬಳಿಕ ಸಂಗ್ರಹವಾದ ಹಣದಿಂದ ಕಂಠಪೂರ್ತಿ ಕುಡಿದ ತಂದೆ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕುಡಿದು ಬಿದ್ದ ತಂದೆಯನ್ನು ಎಬ್ಬಿಸಲು ಪುಟ್ಟ ಬಾಲಕಿ ಹರಸಾಹಸ ಮಾಡಿದ್ದು, ಸಾರ್ವಜನಿಕರ ನೆರವಿಗೆ ಅಂಗಲಾಚಿದ್ದಾಳೆ.
ಮಗು ಸತತ ಒಂದು ಗಂಟೆಯಿಂದ ತನ್ನ ತಂದೆಯನ್ನು ಎಬ್ಬಿಸಲು ಪ್ರಯತ್ನಪಟ್ಟಿದೆ. ಆದರೆ ಮನುಷ್ಯತ್ವ ಮರೆತ ಜನ ಯಾರೂ ಆ ಮಗುವಿನ ನೆರವಿಗೆ ಬರಲಿಲ್ಲ. ಸದ್ಯ ಆ ಮಗುವಿನ ಅಳಲು ಕರಳು ಹಿಂಡುವಂತಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply