ವಿಕೃತ ಕಾಮಿಗೆ ಹೆದರಿ ಹಾಸ್ಟೆಲ್ ಬಿಡುತ್ತಿರುವ ವಿದ್ಯಾರ್ಥಿನಿಯರು!

ಮೈಸೂರು: ಜಿಲ್ಲೆಯ ಕೆ.ಆರ್ ಆಸ್ಪತ್ರೆ ಆವರಣದಲ್ಲಿನ ನರ್ಸಿಂಗ್ ಹಾಸ್ಟೆಲಿನಲ್ಲಿ ಸೈಕೋ ಪ್ರತ್ಯಕ್ಷ ಪ್ರಕರಣದಿಂದ ಭಯಭೀತಗೊಂಡಿರುವ ವಿದ್ಯಾರ್ಥಿನಿಯರು ಹಾಸ್ಟೆಲ್ ಖಾಲಿ ಮಾಡಿ ಮನೆಗಳಿಗೆ ತೆರಳುತ್ತಿದ್ದಾರೆ.

10 ದಿನಕ್ಕೆ ನರ್ಸಿಂಗ್ ಪರೀಕ್ಷೆಗಳು ಇರುವ ಕಾರಣ ಭಯದ ವಾತಾವರಣದಲ್ಲಿ ಓದುವುದು ಕಷ್ಟ ಎಂದು ವಿದ್ಯಾರ್ಥಿನಿಯರು ಹಾಸ್ಟೆಲ್ ಖಾಲಿ ಮಾಡಿ ಮನೆಗಳಿಗೆ ತೆರಳುತ್ತಿದ್ದಾರೆ. ಪರೀಕ್ಷೆ ಆರಂಭವಾಗುವ ವೇಳೆಗಾದರೂ ಹಾಸ್ಟೆಲ್ ನ ಭದ್ರತೆ ಹೆಚ್ಚು ಮಾಡಿ ವಿದ್ಯಾರ್ಥಿನಿಯರು ಭಯವಿಲ್ಲದೆ ಹಾಸ್ಟೆಲ್ ನಲ್ಲಿ ಉಳಿಯುವಂತೆ ವ್ಯವಸ್ಥೆ ಮಾಡಿ ಎಂದು ವಿದ್ಯಾರ್ಥಿನಿಯರ ಪೋಷಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೈಸೂರಲ್ಲಿ ವಿಕೃತ ಕಾಮಿ ಪ್ರತ್ಯಕ್ಷ – ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕಾಮುಕನ ಕಾಟ

ಕೆಲ ದಿನಗಳ ಹಿಂದೆಯಷ್ಟೇ ಹಾಸ್ಟೆಲ್‍ಗೆ ನುಗ್ಗಿದ ವಿಕೃತ ಕಾಮಿ ವಿದ್ಯಾರ್ಥಿನಿಯರು ಒಣಗಿ ಹಾಕಿದ್ದ ಒಳ ಉಡುಪು ಕದ್ದು ಅವಾಂತರ ಸೃಷ್ಟಿಸಿದ್ದ. ಇದರಿಂದ ವಿದ್ಯಾರ್ಥಿನಿಯರು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ ಈ ಬಗ್ಗೆ ಪ್ರತಿಭಟನೆ ಸಹ ನಡೆಸಿದ್ದರು.

ಈ ಪ್ರಕರಣದ ಹಿನ್ನೆಲೆಯಲ್ಲಿ ಹಾಸ್ಟೆಲ್‍ಗೆ ಶಾಸಕ ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹಾಸ್ಟೆಲ್ ಗೆ ಸೂಕ್ತ ಭದ್ರತೆ ಮೂಲ ಭೂತ ಸೌಕರ್ಯ ಒದಗಿಸುವಂತೆ ತಾಕೀತು ಕೂಡ ಮಾಡಿದ್ದರು.

Comments

Leave a Reply

Your email address will not be published. Required fields are marked *