5 ವರ್ಷ ಪ್ರೀತಿಸಿ ಈಗ ನೀನು ಕಪ್ಪಗಿದ್ಯ ಎಂದು ಬೇಡ ಅಂದ್ಳು

ಬೆಂಗಳೂರು: ಅವರಿಬ್ಬರದೂ ಎಂಜಿನಿಯರ್ ಕಾಲೇಜ್‍ನಲ್ಲಿ ಶುರುವಾದ ಪ್ರೀತಿ. ಮೊದಲ ನೋಟಕ್ಕೆ ಒಬ್ಬರಿಗೊಬ್ಬರು ಲವ್ ಮಾಡಲು ಶುರು ಮಾಡಿದ್ರು. ಇಬ್ಬರ ನಡುವೆ ಗಾಢವಾದ ಪ್ರೀತಿ ಬೆಳೆದುಬಿಟ್ಟಿತ್ತು. ಎಲ್ಲೇ ಹೋದ್ರೂ ಇಬ್ಬರೂ ಜೊತೆ ಜೊತೆಯಾಗೇ ಹೋಗ್ತಿದ್ರು. ಆದ್ರೆ ಈಗ 5 ವರ್ಷದ ಪ್ರೀತಿಯನ್ನೇ ಯುವತಿ ತಿರಸ್ಕರಿಸಿದ್ದಾಳೆ.

ಹೌದು. ಅಜಯ್ ಮತ್ತು ನಂದಿನಿಯ ಪ್ರೀತಿ ಐದು ವರ್ಷಗಳಿಂದ ಅಡ್ಡಿ ಆತಂಕಗಳಿಲ್ಲದೇ ಸಾಗಿತ್ತು. ಆದ್ರೆ ಅವನು ನಮ್ಮ ಜಾತಿಯವನಲ್ಲ, ನೋಡಲು ಕಪ್ಪಗಿದ್ದಾನೆ, ಅವನನ್ನ ಬಿಟ್ಟು ಬಿಡು ಅಂತಾ ಯುವತಿಗೆ ಆಕೆಯ ತಂದೆ ಹೇಳಿದ ಮೇಲೆ ಯುವತಿ ಅಜಯ್‍ನನ್ನ ದೂರ ಮಾಡಲು ಶುರು ಮಾಡಿದ್ದಾಳಂತೆ.

ಯಾಕ್ ಹೀಗೆ ಮಾಡ್ತಿದ್ಯ? ಅಂತಾ ಕೇಳಲು ಮನೆ ಬಳಿ ಹೋದ ಅಜಯ್ ಮೇಲೆ ಬಾಗಲಗುಂಟೆ ಪೊಲಿಸ್ ಠಾಣೆಯಲ್ಲಿ ದೂರು ನೀಡಿ ಅಜಯ್‍ನನ್ನ ಜೈಲಿಗೆ ಕಳಿಸಿದ್ದಾರೆ. ಇ-ಮೇಲ್ ಕಳುಹಿಸಿದ್ದೀಯಾ, ಅದು ಮಾಡಿದ್ದೀಯಾ, ಇದು ಮಾಡಿದ್ದೀಯಾ ಅಂತ ಪೊಲೀಸರು ಹುಡುಗನ ಮೇಲೆ ದರ್ಪ ಮೆರೆದಿದ್ದಾರೆಂದು ಆರೋಪಿಸಲಾಗಿದೆ. ಹುಡುಗನ ಕಡೆ ಕೌಂಟರ್ ಕಂಪ್ಲೆಂಟ್ ತಗೋಳಿ ಅಂದ್ರೆ ಬೇಕಾಬಿಟ್ಟಿ ಸತಾಯಿಸಿದ್ದಾರಂತೆ. ನನ್ನನ್ನ ಅವಳು ಜೈಲಿಗೆ ಕಳಿಸಿದ್ರೂ ಪರವಾಗಿಲ್ಲ. ನಾನು ಅವಳನ್ನೇ ಮದುವೆಯಾಗ್ಬೇಕು ಅಂತಾ ಕಾದು ಕೂತಿದ್ದಾರೆ ಅಜಯ್.

ಆದ್ರೆ ಸ್ಟೇಟ್‍ಮೆಂಟ್ ಮಾಡಿಸಿಕೊಳ್ಳೋ ಹೆಸರಿನಲ್ಲಿ ಬಾಗಲಗುಂಟೆ ಪೊಲೀಸರು ಜೇಬಿಂದ ಒಂದು ಸಾವಿರ ರೂಪಾಯಿ ಎತ್ತಿದ್ದಾರೆ ಎನ್ನಲಾಗಿದೆ. ಇತ್ತ ಓದೋ ವಯಸ್ಸಲ್ಲಿ ಮಾಡೊ ಪ್ರೀತಿನ ಉಳಿಸಿಕೊಳ್ಳೋರು ತುಂಬಾನೆ ಕಡಿಮೆ. ಅಪ್ಪಂದೋ ಅಮ್ಮಂದೋ ಸೆಂಟಿಮೆಂಟ್ ಇಟ್ಕೊಂಡು ಪ್ರೀತಿನ ನೆಗ್ಲೆಟ್ ಮಾಡೋರಿಗೆ ಯಾಕ್ರಿ ಬೇಕು ಪ್ರೀತಿ ಅನ್ನೋದು ಅಜಯ್ ಮಾತು.

Comments

Leave a Reply

Your email address will not be published. Required fields are marked *