ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಕುಸಿದು ಬಿದ್ದು ಸಾವು

ಶಿವಮೊಗ್ಗ: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯೋರ್ವಳು ಕುಸಿದು ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಸಾಗರದಲ್ಲಿ ವರದಿಯಾಗಿದೆ.

ಸಾಗರ ನಗರದ ಅಣಲೇಕೊಪ್ಪದ ನಿವಾಸಿ ಮೂರ್ತಿ ಹಾಗೂ ರಾಜೇಶ್ವರಿ ದಂಪತಿಯ ಪುತ್ರಿ ತ್ರಿಶಾ (5) ಮೃತ ದುರ್ದೈವಿ. ಮೂಲತಃ ಸಾಗರ ತಾಲೂಕಿನ ಹೆಗ್ಗೋಡು ಗ್ರಾ.ಪಂ ವ್ಯಾಪ್ತಿಯ ಹೈತೂರಿನ ಕ್ವಾಗೇರಿಯವರಾದ ಮೂರ್ತಿ, ಕುಟುಂಬದ ಜೀವನ ನಿರ್ವಹಣೆಗಾಗಿ ಸಾಗರದ ಸೊರಬ ರಸ್ತೆಯ ಹೊಳೆ ಬಸ್ ನಿಲ್ದಾಣ ಸಮೀಪ ಇರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ತ್ರಿಶಾ ಮತ್ತು ತಾಯಿ ರಾಜೇಶ್ವರಿ ಇದ್ದರು. ತ್ರಿಶಾ ಮನೆಮುಂದೆ ಆಟವಾಡುತ್ತ ಏಕಾಏಕಿ ಕುಸಿದು ಬಿದಿದ್ದಾಳೆ. ಇದನ್ನೂ ಓದಿ: ಗಂಡನ ಎದುರೇ ಪ್ರಿಯಕರನೊಂದಿಗೆ ಲವ್ವಿ ಡವ್ವಿ – ಮಗನೊಂದಿಗೆ ಕೆರೆಗೆ ಹಾರಿದ ಪತಿ

ತ್ರಿಶಾ ಕುಸಿದು ಬಿದ್ದ ತಕ್ಷಣ ರಾಜೇಶ್ವರಿ ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾರೆ. ಕೂಡಲೇ ಸ್ಥಳೀಯರು ಬಾಲಕಿಯನ್ನು ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಿಸುವ ವೇಳೆಗೆ  ತ್ರಿಶಾ ಸಾವನ್ನಪ್ಪಿದ್ದಾಳೆ. ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಪತ್ನಿ ಜೊತೆ ಸ್ನೇಹಿತನ ವಾಟ್ಸಾಪ್ ಚಾಟಿಂಗ್ – ಪಕ್ಕದ್ಮನೆ ಗೆಳೆಯನ ಕೊಂದು ಸುಟ್ಟಾಕಿದ್ರು!

Comments

Leave a Reply

Your email address will not be published. Required fields are marked *