ಕಸಿನ್ ಸಹೋದರಿಯನ್ನೇ ಮದ್ವೆಯಾಗಿ ಫೇಸ್‍ಬುಕ್‍ನಲ್ಲಿ ಯುವತಿಯಿಂದ ಪೋಸ್ಟ್

ಲಕ್ನೋ: ಕಸಿನ್ ಸಹೋದರಿಯನ್ನೇ ಮದುವೆಯಾಗಿ ಯುವತಿಯೊಬ್ಬಳು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಎಲ್ಲರಿಗೂ ಶಾಕ್ ನೀಡಿದ ಘಟನೆ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ನಡೆದಿದೆ.

ವಾರಾಣಾಸಿಯ ರೋಹನಿಯಾ ನಿವಾಸಿಯಾದ ಕಸಿನ್ ಸಹೋದರಿಯರು ಪೋಷಕರ ವಿರುದ್ಧವಾಗಿ ಹೋಗಿ ಮದುವೆ ಆಗಿದ್ದಾರೆ. ಮದುವೆ ಆದ ಬಳಿಕ ಆ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಬುಧವಾರ ಸಹೋದರಿಯರು ಶಿವನ ದೇವಸ್ಥಾನಕ್ಕೆ ಹೋಗಿ ಅಲ್ಲಿದ್ದ ಅರ್ಚಕರಿಗೆ ಮದುವೆ ಮಾಡಿಸಿ ಎಂದು ಹೇಳಿದ್ದಾರೆ. ಆದರೆ ಅರ್ಚಕರು ಮದುವೆ ಮಾಡಿಸಲು ನಿರಾಕರಿಸುತ್ತಾರೆ. ಪಂಡಿತ ನಿರಾಕರಿಸಿದರೂ ಸಹ ಸಹೋದರಿಯರು ದೇವಸ್ಥಾನದ ಒಳಗೆ ಕುಳಿತ್ತಿದ್ದರು.

ಸಹೋದರಿಯರು ಜೀನ್ಸ್, ಟೀ-ಶರ್ಟ್ ಧರಿಸಿ ಅದಕ್ಕೆ ಕೆಂಪು ಬಣ್ಣದ ಚುನ್ನಿ ಹಾಕಿ ಮದುವೆ ಮಾಡಿಕೊಂಡರು. ಸಹೋದರಿಯರು ಮದುವೆ ಆಗುವ ಹೊತ್ತಿಗೆ ದೇವಸ್ಥಾನದ ಬಳಿ ಹೆಚ್ಚು ಜನ ಸೇರಿದ್ದರು. ಅಹಿತಕರ ಘಟನೆ ನಡೆಯುವ ಮೊದಲೇ ಸಹೋದರಿಯರು ಅಲ್ಲಿಂದ ಹೊರಟು ಹೋದರು.

ಸಹೋದರಿಯರನ್ನು ಮದುವೆ ಮಾಡಿಸಿದ್ದಕ್ಕೆ ಕೆಲವರು ಪಂಡಿತರನ್ನು ಟೀಕಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪಂಡಿತ, ಒಬ್ಬಳು ಯುವತಿ ಕಾನ್‍ಪುರದವಳಾಗಿದ್ದು, ಮತ್ತೊಬ್ಬಳು ವಿದ್ಯಾಭ್ಯಾಸಕ್ಕೆ ಎಂದು ಕಸಿನ್ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *