ಅಂಗನವಾಡಿ ಬಾಲಕಿಗೆ ತಿಂಡಿ ಆಸೆ ತೋರಿಸಿ ಲೈಂಗಿಕ ದೌರ್ಜನ್ಯ – ದೂರು ದಾಖಲು

ಚಿಕ್ಕಮಗಳೂರು: ಅಂಗಡಿಗೆ ತಿಂಡಿ ತರಲು ಹೋಗಿದ್ದ ಐದು ವರ್ಷದ ಪುಟ್ಟ ಮಗುವಿನ ಜೊತೆ ಅಂಗಡಿ ಮಾಲೀಕ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ದೂರು ದಾಖಲಾಗಿರು ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಣಕಲ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಕೂಲಿ ಮಾಡಿಕೊಂಡು ಕುಟುಂಬವೊಂದು ವಾಸವಿತ್ತು. ಇಬ್ಬರು ಮಕ್ಕಳು ದೊಡ್ಡ ಮಗು ಐದು ವರ್ಷದ ಹೆಣ್ಣು ಮಗು, ಚಿಕ್ಕದ್ದು 10 ತಿಂಗಳ ಗಂಡು ಮಗು ಮನೆ ಯಜಮಾನ ಕೆಲಸಕ್ಕೆ ಹೋಗುತ್ತಿದ್ದನು. ತಾಯಿ ಚಿಕ್ಕ ಮಕ್ಕಳಾದ ಕಾರಣ ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇದ್ದಳು. ಮಗು ಚಿಕ್ಕದ್ದಾಗಿದ್ದರಿಂದ ತಾಯಿ ಮನೆಗೆ ಬೇಕಾದ ಸಣ್ಣ-ಪುಟ್ಟ ದಿನಸಿ ಸಾಮಾನುಗಳನ್ನು ತರಲು ಐದು ವರ್ಷದ ಮಗುವನ್ನು ಕಳುಹಿಸುತ್ತಿದ್ದಳು. ಇತ್ತೀಚೆಗೆ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಮಗು ಅಮ್ಮನ ಬಳಿ ತಿನ್ನಲು ಏನಾದರು ತಿಂಡಿ ಕೊಡುವಂತೆ ಕೇಳಿದೆ. ಆಗ ಅಮ್ಮ ಮಗುವಿನ ಕೈಗೆ ದುಡ್ಡು ನೀಡಿ ಅಂಗಡಿ ಹೋಗಿ ತಿಂಡಿ ತರಲು ಹೇಳಿದ್ದಾಳೆ. ಆಗ ಮಗು ಅಂಗಡಿಗೆ ಹೋಗುವುದಿಲ್ಲ ಎಂದು ಹಠ ಮಾಡಿದೆ. ಅಮ್ಮ ಏಕೆ ಎಂದು ಪ್ರಶ್ನಿಸಿದ್ದಕ್ಕೆ ನಾನು ಅಂಗಡಿ ಹೋದಾಗ ಮಾಮ ನನ್ನನ್ನು ಒಳಗೆ ಕರೆದುಕೊಂಡು ಹೋಗುತ್ತಾರೆ ಎಂದು ಅಂಗಡಿ ಮಾಲೀಕನ ಕುಚೇಷ್ಠೆ ಬಗ್ಗೆ ಹೇಳಿದ್ದಾಳೆ. ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು – ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತು

ನಾನು ಅಂಗಡಿಗೆ ಹೋದಾಗೆಲ್ಲಾ ಹೀಗೆ ಮಾಡುತ್ತಾರೆ ಎಂದು ಮಗು ಹೇಳಿದೆ. ಮನೆಗೆ ಬರಲ್ಲ ಎಂದು ಹೇಳಿದರೆ, ದುಡ್ಡು ಕೊಡುವುದಿಲ್ಲ ತಿಂಡಿಯನ್ನೂ ಕೊಡುವುದಿಲ್ಲ. ನಿನ್ನನ್ನು ಮನೆಗೆ ಕಳುಹಿಸುವುದಿಲ್ಲ ಇಲ್ಲೇ ಕಟ್ಟಿ ಹಾಕುತ್ತೇನೆ ಎನ್ನುತ್ತಾರೆ ಎಂದು ಮಗು ತಾಯಿ ಬಳಿ ಹೇಳಿದೆ. ತಾಯಿ ಯಾವಾಗ ಹೀಗೆ ಮಾಡಿದ್ದಾನೆ ಎಂದು ಕೇಳಿದಾಗ ಅಂಗನವಾಡಿಗೆ ಹೋಗದೆ ಮನೆಯಲ್ಲೇ ಇದ್ದಾಗ ಈ ರೀತಿ ಮಾಡಿದ್ದಾನೆ ಎಂದು ಹೇಳಿದೆ. ಹಾಗಾಗಿ, ತಾಯಿ ಕೂಲಿಗೆ ಹೋಗಿದ್ದ ಗಂಡ ಬಂದ ಕೂಡಲೇ ವಿಷಯ ತಿಳಿಸಿ ಚಿಕ್ಕ ಮಗುವಿನ ಜೊತೆ ಅಸಭ್ಯವಾಗಿ ವರ್ತಿಸಿದ ಅಂಗಡಿ ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಣಕಲ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್

Comments

Leave a Reply

Your email address will not be published. Required fields are marked *