ಕೈ ಕೈ ಹಿಡ್ಕೊಂಡು ಸುತ್ತಾಡಿದ ಮೇಲೆ ಪ್ರಿಯಕರನ ಕರಾಳ ಮುಖ ಬಯಲು

ಬೆಂಗಳೂರು: ಯುವತಿಯೊಬ್ಬಳು ಪ್ರಿಯಕರನೊಂದಿಗೆ ಕೈ ಕೈ ಹಿಡ್ಕೊಂಡು ಕಾಫಿ ಡೇ, ಪಬ್, ಪಾರ್ಕ್ ಅಂತಾ ಸುತ್ತಾಡಿದ್ದಾರೆ. ಇನ್ನೇನು ಮದುವೆ ಆಗ್ಬೇಕು ಅನ್ನೋವಷ್ಟರಲ್ಲಿ ಹುಡುಗಿಗೆ ಪ್ರಿಯಕರನಿಗೆ ಈ ಮೊದಲು ಮದುವೆಯಾಗಿರುವ ವಿಷಯ ಗೊತ್ತಾಗಿದೆ.

ಬೆಂಗಳೂರಿನ ಬಾಣಸವಾಡಿಯ ಕಾಚರಕನಹಳ್ಳಿ ನಿವಾಸಿಯಾದ ಮೂರ್ತಿ ಎಂಬಾತನೇ ಯುವತಿಗೆ ಮೋಸ ಮಾಡಿದ ಪ್ರಿಯಕರ. ಕಂಟ್ರಾಕ್ಟರ್ ಆಗಿರುವ ಮೂರ್ತಿಗೆ ಒಂದು ದಿನ ಮಡಿಕೇರಿ ಮೂಲದ ಯುವತಿಯೊಬ್ಬರು ಪರಿಚಯವಾಗಿದ್ದರು. ಹೆಚ್ಚಿನ ವಿದ್ಯಾಭ್ಯಾಸ ಮಾಡೋಕೆ ಅಂತಾ ಬೆಂಗಳೂರಿಗೆ ಬಂದಿದ್ದ ಆ ಯುವತಿಯ ಸೌಂದರ್ಯಕ್ಕೆ ಮಾರುಹೋದ ಮೂರ್ತಿ ಅದೊಂದು ದಿನ ಪ್ರೋಪೋಸ್ ಕೂಡ ಮಾಡಿದ್ದ. ಯುವತಿ ಸಹ ಮೂರ್ತಿ ಪ್ರಪೋಸಲ್ ಒಪ್ಪಿಕೊಂಡಿದ್ದರು.

ಆದ್ರೆ ಕೆಲವು ದಿನಗಳ ಹಿಂದೆ ಯುವತಿಗೆ ತನ್ನ ಪ್ರಿಯಕರ ಮೂರ್ತಿಗೆ ನಾಲ್ಕು ವರ್ಷದ ಹಿಂದೆಯೇ ಮದುವೆಯಾಗಿತ್ತು ಎಂಬ ವಿಷಯ ಗೊತ್ತಾಗಿದೆ. ಮೂರ್ತಿ ಮದುವೆ ಆಗ್ತೀನಿ ಅಂತಾ ನಂಬಿಸಿ ಯುವತಿಯನ್ನು ದೈಹಿಕವಾಗಿಯೂ ಬಳಸಿಕೊಂಡಿದ್ದಾನೆ.

ಮೂರ್ತಿಯ ಅಸಲಿ ಬಣ್ಣ ತಿಳಿದ ಯುವತಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ 376 ರ ಅಡಿ ರೇಪ್ ಕೇಸ್ ದಾಖಲು ಮಾಡಿದ್ದಾರೆ. ಕೇಸ್ ದಾಖಲಾದ ಬಳಿಕ ಮೂರ್ತಿಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ.

Comments

Leave a Reply

Your email address will not be published. Required fields are marked *