ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಛಾವಣಿಯಿಂದ ಬಿದ್ದು ಬಾಲಕಿ ಸಾವು

ಲಕ್ನೋ: ಕೋತಿಗಳ ಗುಂಪು ಅಟ್ಟಾಡಿಸಿಕೊಂಡು ಬಂದಾಗ, ಹೆದರಿ ತಪ್ಪಿಸಿಕೊಳ್ಳಲು ಯತ್ನಿಸಿ ಬಾಲಕಿಯೊಬ್ಬಳು ಛಾವಣಿ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಾಗ್‌ಪತ್‌ ಜಿಲ್ಲೆಯಲ್ಲಿ ನಡೆದಿದೆ.

ಸಿನೌಲಿ ಗ್ರಾಮದ ರಿಯಾ ಎಂಬ 13 ವರ್ಷದ ಬಾಲಕಿ ಬಾಗ್‌ಪತ್ ಜಿಲ್ಲೆಯ ಜೋತ್ವಾಲಿಯಲ್ಲಿರುವ ತನ್ನ ತಾಯಿಯ ಅಜ್ಜನ ಮನೆಯಲ್ಲಿ ವಾಸಿಸುತ್ತಿದ್ದಳು. ಭಾನುವಾರ ಟೆರೇಸ್‌ನಲ್ಲಿದ್ದ ವೇಳೆ ಆಕೆಯ ಮೇಲೆ ಮಂಗಗಳ ದಂಡು ಏಕಾಏಕಿ ಸುತ್ತುವರಿದು ದಾಳಿ ಮಾಡಿವೆ. ಇದರಿಂದ ಹೆದರಿದ ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸಿ ಆಯಾತಪ್ಪಿ ಕೆಳಗೆ ಬಿದ್ದಿದ್ದಾಳೆ. ಛಾವಣಿಯಿಂದ ಕೆಳಗೆ ಬಿದ್ದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕುಟುಂಬಸ್ಥರು ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇದನ್ನೂ ಓದಿ: ತೈಲ ದಾಸ್ತಾನು ಕೇಂದ್ರದಲ್ಲಿ ಬೆಂಕಿ ಅವಘಡ – 19 ಮಂದಿ ಸಾವು

ಘಟನೆ ನಡೆದ ಸಂದರ್ಭದಲ್ಲಿ ನಾನು ಮಲಗಿದ್ದೆ. ಎಚ್ಚರವಾಗಿ ಬಂದು ನೋಡಿದಾಗ ನಮ್ಮ ಹುಡುಗಿಯ ಶವ ಪತ್ತೆಯಾಗಿದೆ. ಕೋತಿಗಳು ದಾಳಿ ನಡೆಸಿದ್ದರಿಂದ ಆಕೆಯ ಮೈಮೇಲೆ ತೀವ್ರ ಗಾಯಗಳಾಗಿವೆ ಎಂದು ಬಾಲಕಿಯ ಮಾವ ಶೇಖರ್‌ ತಿಳಿಸಿದ್ದಾರೆ.

ನನ್ನ ಪತ್ನಿ ಮೇಲೂ ಮಂಗಗಳು ದಾಳಿ ಮಾಡಿವೆ. ಆ ಪ್ರಾಣಿಗಳಿಂದ ನಿತ್ಯ ಭಯದಿಂದ ಬದುಕುತ್ತಿದ್ದೇವೆ. ನಮ್ಮ ಗ್ರಾಮದಿಂದ ಮಂಗಗಳು ದೂರ ಹೋದರೆ ಸಾಕು. ಇವುಗಳ ಕಾಟದಿಂದ ಜನರಿಗೆ ನೆಮ್ಮದಿ ಇಲ್ಲ ಎಂದು ನೊಂದು ನುಡಿದಿದ್ದಾರೆ. ಇದನ್ನೂ ಓದಿ: ಮನೆ ಮುಂದೆ ಚಪ್ಪಲಿ ಇಟ್ಟಿದ್ದಕ್ಕೆ ದಂಪತಿಯಿಂದ ವ್ಯಕ್ತಿ ಕೊಲೆ

ಕೋತಿಗಳು ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿರುವ ಘಟನೆಗಳು ಆಗಾಗ ನಡೆಯುತ್ತಿವೆ. ಮಂಗಗಳ ದಾಳಿಗೆ ತುತ್ತಾದ ಬಾಲಕಿ ಗಾಬರಿಯಿಂದ ಮೇಲ್ಛಾವಣಿಯಿಂದ ಬಿದ್ದಿದ್ದಾಳೆ. ಕೋತಿಗಳ ಹಾವಳಿ ತಪ್ಪಿಸಲು ಕ್ರಮಕೈಗೊಳ್ಳಿ ಎಂದು ನಾವು ಅನೇಕ ಬಾರಿ ಸರ್ಕಾರಿ ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಪರಿಹರಿಸಲು ಆಡಳಿತವು ಯಾವುದೇ ನಿರ್ದಿಷ್ಟ ಕ್ರಮವನ್ನು ತೆಗೆದುಕೊಳ್ಳದ ಕಾರಣ ನಮ್ಮ ಮನವಿಯು ನನೆಗುದಿಗೆ ಬಿದ್ದಿದೆ ಎಂದು ಗ್ರಾಮದ ನಿವಾಸಿ ಸುಭಾಷ್ ನಾಯ್ನ್ ಬೇಸರ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *