ಬೀದರ್| ನೀರಿನ ತೊಟ್ಟಿಗೆ ಬಿದ್ದು ಬಾಲಕಿ ದುರ್ಮರಣ

ಬೀದರ್: ಮನೆಯ ಮುಂದೆ ಇರುವ ನೀರಿನ ತೊಟ್ಟಿಯಲ್ಲಿ ಬಾಲಕಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಬೀದರ್ (Bidar) ಜಿಲ್ಲೆಯ ಹುಲಸೂರು (Hulasuru) ಪಟ್ಟಣದಲ್ಲಿ ನಡೆದಿದೆ.

ಶ್ರೀನಿಧಿ ವಿಜಯಕುಮಾರ್ ವಟ್ಟಿಗೆ(5) ಮೃತ ಬಾಲಕಿ. ಮನೆಯ ಮುಂದೆ ಗೆಳೆಯರೊಂದಿಗೆ ಆಟವಾಡುತ್ತಾ ಮೆಹೆಂದಿ ತೊಳೆಯಲು ಬಾಗಿದಾಗ ಕಾಲು ಜಾರಿ ತೊಟ್ಟಿಯಲ್ಲಿ ಬಿದ್ದು ಬಾಲಕಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಮಂಗಳೂರು | ನಡುರಾತ್ರಿ ತಲ್ವಾರ್‌ ಹಿಡಿದು ಹೊಡೆದಾಡಿಕೊಂಡ ರೌಡಿಶೀಟರ್‌ಗಳು

ಯಾರಿಗೂ ಗೊತ್ತಾಗದ ಕಾರಣ ಬಾಲಕಿ ತೊಟ್ಟಿಯಲ್ಲೇ ಸಾವನ್ನಪ್ಪಿದ್ದು, ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಧಿಕೃತ ನಿವಾಸದಲ್ಲಿ ಅಯೋಧ್ಯೆ ಎಡಿಎಂ ಶವವಾಗಿ ಪತ್ತೆ