ಚಾಟಿಂಗ್‍ನಲ್ಲಿ ಗೆಳೆಯನೊಂದಿಗೆ ಜಗಳ-ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

ಕೋಲ್ಕತ್ತಾ: ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನಿಂದ ಜಗಳ ಮಾಡಿಕೊಂಡು ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ ಸೋನಾರಪುರನಲ್ಲಿ ನಡೆದಿದೆ.

12ನೇ ತರಗತಿ ವಿದ್ಯಾರ್ಥಿನಿ ಮೌಸಮಿ ಮಿಸ್ತ್ರಿ ಆತ್ಮಹತ್ಯೆಗೆ ಶರಣಾದ ಯುವತಿ. ಸೋಮವಾರ ಬೆಳಗಿನ ಜಾವ ಮೌಸಮಿ ಆತ್ಮಹತ್ಯೆಗೆ ಶರಣಾಗಿದ್ದು, ಗೆಳೆಯನೊಂದಿಗೆ ಜಗಳ ಮಾಡಿಕೊಂಡಿದ್ದರಿಂದ ಆತ್ಮಹತ್ಯೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಹೊರಗಡೆ ಹೋಗಿದ್ದ ಮೌಸಮಿ ಮನೆಗೆ ಹಿಂದಿರುಗಿ ಬಂದಾಗ ಬೇಸರದಲ್ಲಿದ್ದಳು. ರಾತ್ರಿ ಸುಮಾರು 1.30ರವರೆಗೂ ಆಕೆ ಕೋಣೆಯ ಲೈಟ್ ಆನ್ ಆಗಿತ್ತು. ಆದ್ರೆ ಯಾವಾಗ ಮೌಸಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುವುದು ಗೊತ್ತಿಲ್ಲ ಅಂತಾ ಸಂಬಂಧಿಯೊಬ್ಬರು ಹೇಳಿದ್ದಾರೆ.

ಮೌಸಮಿ ಸಾಯುವ ಮುನ್ನ ಗೆಳೆಯನೊಂದಿಗೆ ತುಂಬಾ ಸಮಯದವರೆಗೆ ಚಾಟ್ ಮಾಡಿದ್ದಾಳೆ. ಇಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ಜಗಳ ನಡೆದಿದ್ದು, ಕೊನೆಗೆ ಮೌಸಮಿ ತನ್ನ ಕೋಣೆಯ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಆಕೆಯ ಮೊಬೈಲ್‍ನಲ್ಲಿಯ ಮಾಹಿತಿಗಳನ್ನು ಸಂಗ್ರಹಿಸಿ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಸಂಬಂಧ ಮೌಸಮಿ ಗೆಳೆಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *