ಬ್ಯಾಂಕಾಕ್: ಸಿನಿಮೀಯ ಸ್ಟೈಲ್‌ನಲ್ಲಿ ಏಕಾಏಕಿ ಭಾರೀ ಪ್ರಮಾಣದ ಭೂಮಿ ಕುಸಿದು, ರಸ್ತೆಯಲ್ಲಿನ ಕಾರುಗಳು 50 ಅಡಿ ಕಂದಕಕ್ಕೆ ಉರುಳಿದ ಘಟನೆ ಬ್ಯಾಂಕಾಕ್‌ನಲ್ಲಿ (Bangkok) ನಡೆದಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಅಂಡರ್ ಗ್ರೌಂಡ್ ರೈಲು ನಿಲ್ದಾಣದ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಭೂಮಿ ಕುಸಿದಿದೆ. ಈ ವೇಳೆ ಮೂರು ಕಾರುಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಅಮೆರಿಕದ H-1B ವೀಸಾ ಹೊಡೆತ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಸ್ವಾಗತ
ಭೂಮಿ ಕುಸಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿಡಿಯೋದಲ್ಲಿ ನಿಧಾನಗತಿಯಲ್ಲಿ ಭೂಮಿ ಕುಸಿಯುತ್ತಿರುವ ದೃಶ್ಯ ಕಂಡುಬಂದಿದೆ. ಅದರೊಂದಿಗೆ ಸುತ್ತಮುತ್ತಲಿನ ವಿದ್ಯುತ್ ಕಂಬ ಹಾಗೂ ನೀರಿನ ಪೈಪ್‌ಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ. ಈ ಕುಸಿತದಿಂದಾಗಿ ನಾಲ್ಕು ಪಥದ ರಸ್ತೆಯ ಮಾರ್ಗ ಸಂಪೂರ್ಣವಾಗಿ ಕಡಿತಗೊಂಡಿದೆ.
WATCH: Massive sinkhole opens up in Bangkok, swallowing parts of a busy street pic.twitter.com/401tq7fB5f
— BNO News Live (@BNODesk) September 24, 2025
ಸದ್ಯ ಕುಸಿತದಿಂದಾಗಿ ಉಂಟಾದ ಹಾನಿಯನ್ನು ಶೀಘ್ರವೇ ಸರಿಪಡಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ತೈವಾನ್‌ನಲ್ಲಿ ʻರಗಾಸಾʼ ಚಂಡಮಾರುತಕ್ಕೆ 14 ಬಲಿ, 124 ಮಂದಿ ಮಿಸ್ಸಿಂಗ್
