ಲೌಡ್ ಸ್ಪೀಕರ್ ವಿವಾದ – ಅರ್ಜಿ ಸಲ್ಲಿಸಲು ಪೊಲೀಸ್ ಇಲಾಖೆಯಿಂದ ಡೆಡ್‍ಲೈನ್

loudspeakers

ಬೆಂಗಳೂರು: ರಾಜ್ಯದಲ್ಲಿ ಆರಂಭಗೊಂಡಿದ್ದ ಲೌಡ್ ಸ್ಪೀಕರ್ ವಿವಾದಕ್ಕೆ ಇದೀಗ ಪೊಲೀಸರು ಫುಲ್‍ಸ್ಟಾಪ್ ಹಾಕಲು ಮುಂದಾಗಿದ್ದು, ಅನಧಿಕೃತ ಮೈಕ್‍ಗಳಿಗೆ ಮೇ 25ರೊಳಗೆ ಅನುಮತಿ ಪಡೆಯಲು ಡೆಡ್‍ಲೈನ್ ನೀಡಲಾಗಿದೆ.

mosque-loudspeakers
ಸಾಂದರ್ಭಿಕ ಚಿತ್ರ

ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಲೌಡ್ ಸ್ಪೀಕರ್ ವಿವಾದ ತಾರಕಕ್ಕೇರಿತ್ತು. ಬಳಿಕ ಸರ್ಕಾರ ಅನಧಿಕೃತ ಮೈಕ್‍ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇದೀಗ ಅನಧಿಕೃತ ಇರುವ ಮೈಕ್‍ಗೆ 25ರ ಒಳಗಾಗಿ ಅನುಮತಿ ಪಡೆಯಬೇಕು. ಆಯಾ ಎಸಿಪಿ ವ್ಯಾಪ್ತಿಯ ಕಚೇರಿಯಲ್ಲಿ ಸಂಬಂಧಪಟ್ಟವರು ಅರ್ಜಿ ಸಲ್ಲಿಸಿ ಅಧಿಕೃತ ಮಾಡಿಕೊಳ್ಳಬೇಕಾಗಿ ಸೂಚಿಸಿದೆ. ಇದನ್ನೂ ಓದಿ: ಸಿಎಂ ದಾವೋಸ್ ಪ್ರವಾಸ ನಾಳೆ ನಿರ್ಧಾರ: ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ಸಂದೇಶ

loud speaker

ಮೇ 25ರ ಒಳಗಾಗಿ ಅರ್ಜಿ ಸಲ್ಲಿಸಿ ಅನಧಿಕೃತ ಮೈಕ್‍ಗಳನ್ನು ಅಧಿಕೃತ ಮಾಡಿಕೊಳ್ಳದೇ ಹೊದರೆ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದು, ರಜೆ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಹೋಗಿ ಅರ್ಜಿ ಸಲ್ಲಿಸುವಂತೆ ಸಂಬಂಧಪಟ್ಟವರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಇದನ್ನೂ ಓದಿ: ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್

ರಾಜ್ಯದಲ್ಲಿ ಮಾತ್ರವಲ್ಲದೆ ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಲೌಡ್ ಸ್ಪೀಕರ್ ವಿವಾದ ಬಾರಿ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

Comments

Leave a Reply

Your email address will not be published. Required fields are marked *