ಬೆಂಗಳೂರಿನಲ್ಲಿ ಮೆಣಸಿನಕಾಯಿ ಖರೀದಿಸಿದ ಜರ್ಮನಿ ಸಚಿವ – ಡಿಜಿಟಲ್‌ ಇಂಡಿಯಾಗೆ ಪ್ರಶಂಸೆ

ಬೆಂಗಳೂರು: ಜಿ20 (G20) ಸಭೆಗಾಗಿ ಬೆಂಗಳೂರಿಗೆ ಆಗಮಿಸಿರುವ ಜರ್ಮನಿಯ ಸಚಿವರು (German Minister) ನಗರದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಖರೀದಿಸಿ ಗಮನ ಸೆಳೆದ ಘಟನೆ ನಡೆಯಿತು.

ಜರ್ಮನಿಯ ಡಿಜಿಟಲ್‌ ಮತ್ತು ಸಾರಿಗೆ ಸಚಿವ ವೋಲ್ಕರ್‌ ವಿಸ್ಸಿಂಗ್ (Wissing) ಅವರು ಬೆಂಗಳೂರಿಗೆ ಮಾರುಕಟ್ಟೆಯಲ್ಲಿ ಅಡ್ಡಾಡಿದರು. ವ್ಯಾಪಾರ ವಹಿವಾಟು ಹೇಗೆ ನಡೆಯುತ್ತದೆ ಎಂದು ಗಮನಿಸಿದರು. ನಂತರ ತಾವೇ ಮೆಣಸಿನಕಾಯಿ ಖರೀದಿ ಮಾಡಿದರು. ಇದನ್ನೂ ಓದಿ: ಕೆಆರ್‌ಎಸ್‌ ಬೃಂದಾವನದಲ್ಲಿ ಹುಚ್ಚು ನಾಯಿ ದಾಳಿ – ಐವರು ಪ್ರವಾಸಿಗರಿಗೆ ಗಾಯ

ಭಾನುವಾರ ಮಡಿವಾಳ ಮಾರುಕಟ್ಟೆಗೆ ಭೇಟಿ ನೀಡಿದ್ದ ಜರ್ಮನಿ ಸಚಿವ 1 ಕೆಜಿ ಮೆಣಸಿನಕಾಯಿ ಖರೀದಿಸಿದರು. ಯುಪಿಐ ಮೂಲಕ ಹಣ ಪಾವತಿ ಮಾಡಿ ಭಾರತದ ಡಿಜಿಟಲ್‌ ವ್ಯಾಪಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿ ಡಿಜಿಟಲ್ ಇಂಡಿಯಾ ಬಗ್ಗೆ ಜರ್ಮನಿ ರಾಯಭಾರ ಕಚೇರಿ ಪ್ರಶಂಸೆ ವ್ಯಕ್ತಪಡಿಸಿದೆ. ತಮ್ಮ ಸಚಿವರು ಭಾರತದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಖರೀದಿಸುತ್ತಿರುವ ಫೋಟೋ ಕೂಡ ಹಂಚಿಕೊಂಡಿದೆ. ಇದನ್ನೂ ಓದಿ: Nagara Panchami: ಮಹಾರಾಷ್ಟ್ರದಲ್ಲಿ ನಾಗರಪಂಚಮಿ ಆಚರಣೆ ಹೇಗೆ?

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]