ಕಾರುಗಳಿಗೂ ಚಾಟ್‌ಜಿಪಿಟಿ ಅಳವಡಿಸಲು General Motors ಚಿಂತನೆ

ವಾಷಿಂಗ್ಟನ್: ಅಮೆರಿಕದ (USA) ಪ್ರಖ್ಯಾತ ವಾಹನ ಸಂಸ್ಥೆ ಹಾಗೂ ಷೆವರ್ಲೆ, ಬ್ಯೂಕ್, ಜಿಎಂಸಿ ಮತ್ತು ಕ್ಯಾಡಿಲಾಕ್ ಕಾರುಗಳನ್ನು ಉತ್ಪಾದಿಸುವ ಜನರಲ್ ಮೋಟರ್ಸ್ (General Motors) ತನ್ನ ವಾಹನಗಳಲ್ಲಿ ಚಾಟ್‌ಜಿಪಿಟಿ (ChatGPT) ತಂತ್ರಜ್ಞಾನ ಬಳಸಲು ನಿರ್ಧರಿಸಿದೆ.

ಮೈಕ್ರೋಸಾಫ್ಟ್ ಕಾರ್ಪ್ (Microsoft Corp) ಸಹಯೋಗದ ಭಾಗವಾಗಿ ಚಾಟ್‌ಜಿಪಿಟಿ ಅಳವಡಿಸಲು ನಿರ್ಧರಿಸಿರುವುದಾಗಿ ಜನರಲ್ ಮೋಟರ್ಸ್ ಉಪಾಧ್ಯಕ್ಷ ಸ್ಕಾಟ್ ಮಿಲ್ಲರ್ (Scott Miller) ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಅತಿದೊಡ್ಡ ಬ್ಯಾಂಕ್ ದಿವಾಳಿ – Silicon Valley Bank ಬಂದ್

ಸಾಮಾನ್ಯವಾಗಿ ಚಾಟ್‌ಜಿಪಿಟಿ ಎಲ್ಲದರಲ್ಲೂ ಬಳಕೆಯಲ್ಲಿದೆ. ಹಾಗಾಗಿ ವಾಹನಗಳ ವೈಶಿಷ್ಟ್ಯಗಳು, ಗ್ಯಾರೇಜ್ ಡೋರ್ ಕೋಡ್‌ನಂತಹ ಪ್ರೋಗ್ರಾಮ್‌ಗಳು ಅಥವಾ ಕ್ಯಾಲೆಂಡರ್ ವೇಳಾಪಟ್ಟಿ ಸಂಯೋಜನೆ ಮಾಡುವುದು ಹೇಗೆ? ಎಂಬೆಲ್ಲಾ ಮಾಹಿತಿ ತಿಳಿಯಲು ಚಾಟ್‌ಜಿಪಿಟಿ ಬಳಸಬಹುದು. ಈ ಹಿಂದೆ ಅಮೆರಿಕದಲ್ಲಿ ಕೃತಕ ಬುದ್ಧಿಮತ್ತೆ ಸಾಧನಗಳನ್ನ ವರ್ಚುವಲ್ ಪರ್ಸನಲ್ ಅಸಿಸ್ಟೆಂಟ್ ಕೆಲಸಕ್ಕಾಗಿ ಬಳಸಲಾಗುತ್ತಿತ್ತು ಎಂದು ಮಿಲ್ಲರ್ ಹೇಳಿದ್ದಾರೆ. ಇದನ್ನೂ ಓದಿ: ಈ ಇಲಿಗೆ ತಾಯಿ ಇಲ್ಲ.. ಇಬ್ಬರು ತಂದೆಯಂದಿರಂತೆ – ಸಲಿಂಗಿಗಳಿಂದ ಜನಿಸುತ್ತವೆ ಜೈವಿಕ ಮಕ್ಕಳು!

ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಚಾಟ್‌ಜಿಪಿಟಿ ಮಾಲೀಕ ಓಪನ್‌ಎಐ ನಲ್ಲಿ (ಕೃತಕ ಬುದ್ದಿಮತ್ತೆ) ಬಹು-ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಜೊತೆಗೆ ತನ್ನ ಎಲ್ಲಾ ಉತ್ಪನ್ನಗಳಿಗೆ ಚಾಟ್‌ಬಾಟ್‌ನ ತಂತ್ರಜ್ಞಾನ ಅಳವಡಿಸುವ ಗುರಿ ಹೊಂದಿದೆ. ಹಾಗಾಗಿ ದೈತ್ಯ ಟೆಕ್ ಕಂಪನಿಯಾಗಿರುವ ಮೈಕ್ರೋಸಾಫ್ಟ್ ವಾಹನಗಳಲ್ಲಿ ಹೆಚ್ಚಿನ ತಂತ್ರಜ್ಞಾನ ಅಳವಡಿಸುವ ಪ್ರಯತ್ನ ಮುಂದುವರಿಸಿದೆ.

Comments

Leave a Reply

Your email address will not be published. Required fields are marked *