ರೇಪ್ & ಮರ್ಡರ್ ಆದ ಬಾಲಕಿ ಹೆಸ್ರಲ್ಲಿ ಶಾಲೆಗಳಲ್ಲಿ ಲಿಂಗ ಸಮಾನತೆ ಕ್ಲಾಸ್ ನೀಡ್ಬೇಕು: ನಟ ಚೇತನ್

ಕಲಬುರಗಿ: ಜಿಲ್ಲೆಯ ಆಳಂದ್ ನಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣ ಸಂಬಂಧ ಈ ಬಾಲಕಿಯ ಹೆಸರಲ್ಲಿ ಶಾಲೆಗಳಲ್ಲಿ ಲಿಂಗ ಸಮಾನತೆ ಕ್ಲಾಸ್ ನೀಡಬೇಕು ಎಂದು ನಟ ಚೇತನ್ (Actor Chetan) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಅಮಾನವೀಯ ಕೃತ್ಯ ನಡೆದಿದೆ. 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆಯಾಗಿದೆ. ಕರ್ನಾಟಕದ ಜನತೆಗೆ ಬಹಳ ನೋವಾಗಿದೆ. 14 ವರ್ಷದ ಬಾಲಕಿ ಒಂದು ಕುಟುಂಬದ ಮಗಳಲ್ಲ, ಕರ್ನಾಟಕ (Karnataka) ದ ಮಗಳು. ಇಂತಹ ಪ್ರಕರಣ ನಡೆದಾಗ ಜಾತಿ ಲೇಪನ ಕಟ್ಟುವ ಕೆಲಸ ಆಗುತ್ತೆ. ಆದರೆ ಈ ಕೇಸ್ ನಲ್ಲಿ ಎಲ್ಲರು ಬಾಲಕಿ ಪರವಾಗಿ ನಿಂತಿದ್ದಾರೆ, ಜಾತಿಗೆ ಸೀಮಿತವಾಗಿಲ್ಲ ಎಂದು ಹೇಳಿದರು.

ಕೇರಳ (Kerala) ದಲ್ಲಿ ಲಿಂಗ ಸಮಾನತೆ ಕ್ಲಾಸ್ (Gender Equality Class) ಗಳನ್ನ ಹೇಳಿ ಕೋಡುತ್ತಿದ್ದಾರೆ. ಅದೇ ರೀತಿ ನಮ್ಮಲ್ಲಿಯೂ ಈ ಬಾಲಕಿಯ ಹೆಸರಲ್ಲಿ ಶಾಲೆಗಳಲ್ಲಿ ಲಿಂಗ ಸಮಾನತೆ ಕ್ಲಾಸ್ ನೀಡಬೇಕು ಎಂದು ಚೇತನ್ ಹೇಳಿದರು. ಇದನ್ನೂ ಓದಿ: ಅಶ್ಲೀಲ ದೃಶ್ಯ ನೋಡಿ ಪ್ರಚೋದನೆ – ಅಪ್ರಾಪ್ತನಿಂದ ಬಾಲಕಿಯ ಮೇಲೆ ರೇಪ್‌, ಕೊಲೆ

ಬಾಲಕಿಯ ಕುಟುಂಬಕ್ಕೆ ನಾನು ಹೋಗಿ ಸಾಂತ್ವನ ಹೇಳಿ ಬಂದಿದ್ದೇವೆ. ಬಾಲಕಿ ಸಾವಿಗೆ ನ್ಯಾಯ ಸಿಗೇಬೇಕು. ಪ್ರಕರಣದಲ್ಲಿ ಒಬ್ಬ ಬಾಲಕನನ್ನ ಅರೆಸ್ಟ್ ಮಾಡಿದ್ದಾರೆ, ಅವನಿಗೆ ತಕ್ಕ ಶಿಕ್ಷೆ ಆಗಬೇಕು. ಆ ಬಾಲಕಿಯ ಕುಟುಂಬಕ್ಕೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಇದೇ ವೇಳೆ ಚೇತನ್ ಆಗ್ರಹಿಸಿದರು. ಇದನ್ನೂ ಓದಿ: ಬಯಲು ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ರೇಪ್‌ ಮಾಡಿ ಕೊಲೆ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *