ಗೌರಿ ಲಂಕೇಶ್ ಹತ್ಯೆ ಕೇಸ್‍ನಲ್ಲಿ ಮಹತ್ವದ ಸಾಕ್ಷಿ ಲಭ್ಯ- ಆರೋಪಿಗಾಗಿ ಗೋವಾದಲ್ಲಿ ನಡೀತಿದೆ ತಲಾಶ್

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಾ ಇದ್ದು ಮಹತ್ವದ ಬೆಳವಣಿಗೆ ಪಡೆದುಕೊಂಡಿದೆ.

ಸಂಶೋಧಕ ಕಲುಬುರಗಿ ಮತ್ತು ಗೌರಿ ಹತ್ಯೆಯನ್ನು ಮಾಡಿರೋದು ಒಂದೇ ಗುಂಪು. ಒಂದೇ ಮಾದರಿಯ ಪಿಸ್ತೂಲಿನಿಂದ ಕೊಲೆ ಮಾಡಲಾಗಿದೆ ಅಂತ ಎಫ್‍ಎಸ್‍ಎಲ್ ವರದಿ ಕೊಟ್ಟಿದೆ. ಇದೇ ವರದಿಯನ್ನ ಮುಂದಿಟ್ಟುಕೊಂಡು ಎಸ್‍ಐಟಿ ತಂಡ ಸನಾತನ ಸಂಸ್ಥಾ ಮೇಲೆ ತನಿಖೆ ಮಾಡ್ತಿದೆ. ಪ್ರಮುಖವಾಗಿ ಸನಾತನ ಸಂಸ್ಥಾದ ಪ್ರಮುಖ ಸದಸ್ಯ ರುದ್ರಾ ಪಾಟೀಲ್ ಎಂಬಾತನೇ ಗೌರಿ ಹತ್ಯೆ ಮಾಸ್ಟರ್ ಮೈಂಡ್ ಅನ್ನೋ ಅನುಮಾನದಲ್ಲೇ ತನಿಖೆ ನಡೆಸ್ತಿದೆ.

ಈ ಪ್ರಕರಣದಲ್ಲಿ ಸನಾತನ ಸಂಸ್ಥಾ ಮೇಲೆ ಅನುಮಾನ ಪಡೋದಕ್ಕೂ ಕೂಡ ಒಂದು ಇತಿಹಾಸ ಇದೆ. ಸನಾತನ ಸಂಸ್ಥಾದ ಕೆಲಸ ಅಂದ್ರೆ ಹಿಂದೂ ಧರ್ಮವನ್ನು ಉಳಿಸೋದು ಮತ್ತು ಬೆಳೆಸೋದು. ಹಿಂದೂ ಧರ್ಮಕ್ಕೆನಾದ್ರೂ ಸಮಸ್ಸೆ ಉಂಟಾದ್ರೆ ಅದಕ್ಕೆ ಧಕ್ಕೆ ಮಾಡಿದವರಿಗೆ ತಕ್ಕ ಶಿಕ್ಷೆ ಅನ್ನೋದು ಆ ಸಂಘಟನೆಯ ವಾದ. ಭಾರತೀಯ ಸಂವಿಧಾನದಲ್ಲಿ ಕೃತ್ಯಕ್ಕೆ ತಕ್ಕಂತೆ ಶಿಕ್ಷೆ ಇರೋ ಹಾಗೆ ಸನಾತನ ಸಂಸ್ಥಾದಲ್ಲೂ ವಿಶೇಷ ಸಂವಿಧಾನ ಮತ್ತು ಕಾನೂನು ಇದೆ. ಸರಿ ಸುಮಾರು 21 ಪ್ರತ್ಯೇಕ ಪುಸ್ತಕಗಳು ಇದ್ದು, ಒಂದೊಂದು ಪುಸ್ತಕವೂ ಸರಿಸುಮಾರು ನೂರು ಪುಟಗಳಿವೆ.

ಸನಾತನ ಸಂಸ್ಥಾದ ವಿಶೇಷತೆ ಏನು ?
* ಸನಾತನ ಸಂಸ್ಥಾಕ್ಕೆ ವಿಶೇಷ ಸಂವಿಧಾನ.
* 21 ಪುಸ್ತಕಗಳು- ಒಂದೊಂದು ಪುಸ್ತಕ 100 ಪುಟಗಳು.
* ಮರಾಠಿ ಭಾಷೆಯಲ್ಲಿ ಸಂವಿಧಾನ ರಚನೆ.
* ಹಿಂದೂ ಧರ್ಮದ ವಿರುದ್ಧ ಮಾತನಾಡಿವರಿಗೆ ಶಿಕ್ಷೆ.
* ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ.
* ಹಿಂದೂ ಧರ್ಮ ಎಷ್ಟು ಹಿಯಾಳಿಸ್ತಾರೆ ಅಷ್ಟು ಶಿಕ್ಷೆ.
* ಸ್ವಲ್ಪ ಹಿಯಾಳಿಸಿದ್ರೆ ಬುದ್ಧಿವಾದ ಹೇಳೋ ಪ್ರಯತ್ನ.
* ಬುದ್ಧಿ ಹೇಳಿಯೂ ಮುಂದುವರೆಸಿದ್ರೆ ಕೈ ಕತ್ತರಿಸೋದು, ಕಾಲು ಕತ್ತರಿಸೋದು.
* ಧರ್ಮಕ್ಕೆ ಕುತ್ತು ತರ್ತಾರೆ ಅಂದ್ರೆ ಮೋಕ್ಷವೇ ಕೊನೆ.
* ಇನ್ನು ಕಾಂಗ್ರೆಸ್ ಪಕ್ಷದ ವಿರುದ್ಧವೂ ಈ ಸಂಘಟನೆ ಕೆಲಸ ಮಾಡುತ್ತೆ

ಇದಿಷ್ಟು ಸನಾತನ ಸಂಸ್ಥಾ ಮಾಹಿತಿಯಾಗಿದ್ದು, ಗೌರಿ ಲಂಕೇಶ್ ಹತ್ಯೆಗೆ ರುದ್ರಾ ಪಾಟೀಲನೇ ಜವಬ್ದಾರಿ ಹೊತ್ತಿದ್ದ ಅನ್ನೋ ಸಂಶಯವೂ ಎದುರಾಗಿದೆ. ಇಷ್ಟೆಲ್ಲಾ ಮಾಹಿತಿಯನ್ನು ಆಧರಿಸಿ ಬೇರೆ ಬೇರೆ ಆಯಾಮಗಳಲ್ಲೂ ಸಹ ಎಸ್‍ಐಟಿ ವಿಚಾರಣೆ ನಡೆಸ್ತಾ ಇದೆ.

ಆದ್ರೆ ಸಂಸ್ಥಾ ವಕ್ತಾರ ಚೇತನ್ ರಾಜಹನ್ಸ್ ಈ ಆರೋಪವನ್ನ ತಳ್ಳಿ ಹಾಕಿದ್ದಾರೆ. ಸನಾತನ ಸಂಸ್ಥೆಯ ಹೆಸರು ಕೆಡಿಸಲು ಗೌರಿ ಲಂಕೇಶ್ ಸಾವನ್ನ ನಮ್ಮ ತಲೆಗೆ ಕಟ್ತಿದ್ದಾರೆ. ಗೌರಿ ಲಂಕೇಶ್ ಹತ್ಯೆಗೂ, ಕಲಬುರುಗಿ ಹತ್ಯೆಗೂ ಸನಾತನ ಸಂಸ್ಥೆಗೂ ಸಂಬಂಧವಿಲ್ಲ. ಸನಾತನ ಸಂಸ್ಥೆಗೆ ಮಸಿ ಬಳಿಯಲು ಹಿಂದೂ ವಿರೋಧಿಗಳು ಸಂಚು ರೂಪಿಸಿದ್ದಾರೆ. ತನಿಖೆಯ ದಿಕ್ಕನ್ನ ಬೇರೆಡೆಗೆ ತಿರುಗಿಸಲು ಹಿಂದೂ ವಿರೋಧಿಗಳು ಮಾಡ್ತಿರೋ ಷಡ್ಯಂತ್ರ. ಶೀಘ್ರದಲ್ಲೇ ಸುದ್ದಿಗೋಷ್ಠಿ ಕರೆದು ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತೇವೆ ಅಂತ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *