ಬೆಂಗಳೂರು: ಮಂಗಳವಾರ ರಾತ್ರಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಲಂಕೇಶ್ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.
ಗೌರಿ ಅವರ ಸಹೋದರ ಇಂದ್ರಜಿತ್ ಲಂಕೇಶ್ ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಣ್ಣುಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಗೌರಿ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತರಲಾಗಿತ್ತು. ಈಗಾಗಲೇ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಮರಣೋತ್ತರ ಶವ ಪರೀಕ್ಷೆಯ ಬಳಿಕ ಗೌರಿಯವರ ಮೃತ ದೇಹವನ್ನು ಸಾರ್ವಜನಿಕರ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದ ಬಳಿ ಇರಿಸಲಾಗುವುದು. ಅಂತಿಮ ದರ್ಶನದ ಬಳಿಕ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿರೋ ಸಿಎಂ https://t.co/fTqumUGQ49#Bengaluru #Siddaramaiah #Journalist #GauriLankesh pic.twitter.com/OwoqEg522z
— PublicTV (@publictvnews) September 6, 2017
ವಿಡಿಯೋ: ಗೌರಿ ಲಂಕೇಶ್ ಹತ್ಯೆ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿದ್ದೇನು? https://t.co/PTPD3mxs4z#GouriLankesh #Murder #Eyewitness #Video pic.twitter.com/xEdcULX95z
— PublicTV (@publictvnews) September 6, 2017
ಗೌರಿ ಲಂಕೇಶ್ ಹತ್ಯೆ ಹಿಂದೆ ನಕ್ಸಲರ ಕೈವಾಡ ಶಂಕೆ https://t.co/EmWh1EbouV #GauriLankeshMurder #Shootout #Naxalite pic.twitter.com/8VU0ozi9Lh
— PublicTV (@publictvnews) September 6, 2017
3 ದಿನದ ಹಿಂದೆಯೇ ಗೌರಿ ಲಂಕೇಶ್ ಹತ್ಯೆಗೆ ಯತ್ನ https://t.co/zzcaStsfWq #GauriLankesh #Shootout #Bengaluru pic.twitter.com/ICSRtCvdeO
— PublicTV (@publictvnews) September 6, 2017
'ನಮ್ಮ ಶತ್ರು' ಯಾರೆಂದು ನಮ್ಮೆಲ್ಲರಿಗೂ ಗೊತ್ತು- ಸಾವಿಗೂ ಮುನ್ನ ಟ್ವೀಟ್ ಮಾಡಿದ್ದ ಗೌರಿ ಲಂಕೇಶ್ https://t.co/rnGz4i9KLy #GauriLankesh #Shootout #Tweet pic.twitter.com/jT6qqRbPJS
— PublicTV (@publictvnews) September 6, 2017









Leave a Reply