ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ದಂಪತಿ ಸಾವು- ಅನಾಥವಾದ ವೃದ್ಧಾಶ್ರಮ

ಮಡಿಕೇರಿ: ಮನೆ ಮಠ ಇಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದ 32 ಹಿರಿ ಜೀವಗಳಿಗೆ ಆಧಾರಸ್ತಂಭವಾಗಿದ್ದರು. ತಮ್ಮ ಬಳಿ ಹಣ ಇರಲಿ ಇಲ್ಲದೇ ಹೋಗಲಿ ಆಶ್ರಯ ನೀಡಿ ಮೂರು ಹೊತ್ತು ಊಟ ಹಾಕಿ ತನ್ನ ಕುಟುಂಬ ಸದಸ್ಯರು ಎಂದೇ ಭಾವಿಸಿ ಅವರಿಗಾಗಿಯೇ ಜೀವನ ಮುಡಿಪಾಗಿಟ್ಟ ದಂಪತಿ ಇಂದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಅವರನ್ನೆ ನಂಬಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದ 32 ಹಿರಿಯ ಜೀವಗಳು ಇಂದು ನಿಜಕ್ಕೂ ಅನಾಥರಾಗಿದ್ದಾರೆ.

ನಮಗೆ ಇನ್ನೂ ಮುಂದೆ ಯಾರು ದಿಕ್ಕು ಸಾರ್. ಇಷ್ಟು ದಿನ ಸ್ವತಃ ತಂದೆ-ತಾಯಿಗಳಿಗೆ ಸೇವೆ ಮಾಡುವ ಹಾಗೆ ದಂಪತಿ ನಮಗೆ ತುತ್ತು ಅನ್ನವನ್ನು ನೀಡಿ ಸಾಕಿದ್ದಾರೆ ಸರ್. ಪ್ರತಿ ದಿನ ಪ್ರೀತಿಯಿಂದ ಮಾತಾನಾಡಿಸುತ್ತಾ ಇದ್ರು ಸರ್. ಔಷಧಿ ತೆಗೆದುಕೊಂಡಿಲ್ಲ ಅಂದ್ರು ಬೈದು ಔಷಧಗಳನ್ನು ನೀಡುತ್ತಿದ್ದರು. ಹೀಗೆ ಒಬ್ಬೊಬ್ಬರು ಕಣ್ಣಂಚಲ್ಲಿ ನೀರು ತುಂಬಿಕೊಂಡು ಮಾತಾನಾಡುವ ದೃಶ್ಯಗಳನ್ನು ನೋಡಿದ್ರೆ ನಿಜಕ್ಕೂ ಎಂಥವರ ಮನಸ್ಸು ಕರಗದೇ ಇರಲ್ಲ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ – ನಿರ್ಗತಿಕರಿಗೆ ಆಸರೆಯಾಗಿದ್ದ ರಮೇಶ್ ಕೊನೆಯುಸಿರು

ಹೌದು. ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿ ರಮೇಶ್ ಮತ್ತು ಅವರ ಪತ್ನಿ ರೂಪಾ ಅವರು ಕಳೆದ 8 ವರ್ಷಗಳಿಂದ ವಿಕಾಸ್ ಜನಸೇವಾ ಟ್ರಸ್ಟ್ ಹೆಸರಿನ ಮೂಲಕ ಅನಾಥ ಆಶ್ರಮ ನಡೆಸುತ್ತಿದ್ದರು. ಸರ್ಕಾರದ ಯಾವುದೇ ಅನುದಾನವಿಲ್ಲದೆ ದಾನಿಗಳ ಸಹಾಯ ಮತ್ತು ಸ್ವಂತ ದುಡಿಮೆಯಿಂದ ಬಂದ ಹಣದಲ್ಲಿ 32 ಅನಾಥ ವೃದ್ಧರನ್ನು ಸಾಕಿ ಸಲಹುತ್ತಿದ್ದರು. ಆದರೆ ಅಕ್ಟೋಬರ್ 4 ರ ರಾತ್ರಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಪತಿ-ಪತ್ನಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ರಮೇಶ್ ಸಾವನ್ನಪ್ಪಿದ್ರು. ಇದಾದ ಬಳಿಕ ರಮೇಶ್ ಪತ್ನಿ ರೂಪ ಅವರು ಸೋಮವಾರ ರಾತ್ರಿ ಸುಮಾರು 11:30ರ ಸುಮಾರಿಗೆ ಸಾವನ್ನಪ್ಪಿದ್ದಾರೆ. ಇಬ್ಬರು ಒಟ್ಟಿಗೆ ಆಶ್ರಮ ಕೆಲಸ ಮಾಡಿಕೊಂಡು ಹಿರಿ ಜೀವಿಗಳಿಗೆ ಆಶ್ರಯ ನೀಡಿದ ಪತಿ-ಪತ್ನಿ ಇಬ್ಬರು ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಅಂದಹಾಗೆ ದಂಪತಿ ಈ ಹಿಂದೆ ನಿಮ್ಮ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದು ತಮ್ಮ ಆಶ್ರಮದ ಬಗ್ಗೆ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು. ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಅವರೊಂದಿಗೆ ವಿಕಾಸ್ ಜನಸೇವಾ ಟ್ರಸ್ಟ್ ಎಂದು ಆಶ್ರಮ ಇದೆ ಸರ್. ತಮಗೆ ಸ್ವತಃ ಜಾಗ ಇಲ್ಲ. ಬಾಡಿಗೆ ಮನೆ ತೆಗೆದುಕೊಂಡು ಅಶ್ರಮ ನಡೆಸುತ್ತಾ ಇದ್ದೀವಿ. ಸರ್ಕಾರದ ಯಾವುದೇ ಯೋಜನೆ ಪಡೆಯದೇ ಸಾರ್ವಜನಿಕರು ನೀಡುವ ನೆರವಿನಿಂದ ಆಶ್ರಮ ನಡೆಸುತ್ತಿರುವುದಾಗಿ ಬೆಳಕು ಕಾರ್ಯಕ್ರಮದಲ್ಲಿ ತಿಳಿಸಿದ್ದರು.

ಇದಕ್ಕೆ ಸ್ಪಂದಿಸಿದ ಹೆಚ್.ಆರ್ ರಂಗನಾಥ್ ಅವರು, ಅಂದಿನ ಮಡಿಕೇರಿ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರೊಂದಿಗೆ ದೂರವಾಣಿ ಮೂಲಕ ಮಾತಾನಾಡಿ ಸಮಸ್ಯೆಮನವರಿಕೆ ಮಾಡಿದ್ದರು. ಆಗ ಮಾಜಿ ಶಾಸಕರು ತಮ್ಮ ಸ್ವಂತ ಹಣದಲ್ಲೇ ಜಾಗ ಖರೀದಿಸಿ ಆಶ್ರಮ ಕಟ್ಟುಕೊಡುವುದಾಗಿ ಭರವಸೆ ನಿಡಿದ್ದರು. ಇದರಿಂದ ರಮೇಶ್ ಹಾಗೂ ಪತ್ನಿ ರೂಪ ಆಶ್ರಮ ನಿವಾಸಿಗಳು ಸಂತೋಷ ಪಟ್ಟಿದ್ದರು. ಅದರಂತೆ ಕೆಲ ತಿಂಗಳ ಹಿಂದೆ ಆಶ್ರಮದ ಪಕ್ಕದಲ್ಲೇ ಜಾಗವನ್ನು ಗುರುತಿಸಿ ಗುದ್ದಲಿ ಪೂಜೆಯನ್ನು ನೇರವೇರಿಸಿದ್ರು. ಬ್ಲೂ ಪ್ರಿಂಟ್ ಕೂಡ ತೆಗೆದು ಸುಮಾರು 50 ಲಕ್ಷ ವೆಚ್ಚದಲ್ಲಿ ಅಶ್ತಮ ನಿರ್ಮಾಣ ಕಾರ್ಯ ಅರಂಭಾಗುವ ಹಂತಕ್ಕೆ ತಲುಪಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿ ಇದೀಗ ಈ ಆಶ್ರಮದ ಹಿರಿಯ ಜೀವಿಗಳು ನಿಜಕ್ಕೂ ಅನಾಥರಾಗಿದ್ದಾರೆ.

ಒಟ್ಟಿನಲ್ಲಿ 32 ಹಿರಿಯ ಜೀವಿಗಳಿಗೆ ಆಶ್ರಯದಾತವಾಗಿದ್ದ ಪತಿ ರಮೇಶ್ ಪತ್ನಿ ರೂಪ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಇಬ್ಬರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದು, ನಿಜಕ್ಕೂ ದುರಂತವೇ ಸರಿ. ಈ ಇಬ್ಬರ ಅಗಲಿಕೆಯಿಂದ ಕೊಡಗಿನ ಜನರು ಕಂಬನಿ ಮಿಡಿಯುತ್ತಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]