ಸಿಲಿಕಾನ್ ಸಿಟಿ ಮತ್ತೆ ಗಾರ್ಬೇಜ್ ಸಿಟಿ- ರಾಜಧಾನಿಯಲ್ಲಿ 3 ದಿನಗಳಿಂದ ವಿಲೇವಾರಿ ಆಗಿಲ್ಲ ಕಸ

ಬೆಂಗಳೂರು: ಬೆಳ್ಳಳ್ಳಿ ಕ್ವಾರಿಯಲ್ಲಿ ಕಸ ಹಾಕಲು ಸ್ಥಳೀಯರ ವಿರೋಧ ವ್ಯಕ್ತಪಡಿಸುತ್ತಿರುವ ಪರಿಣಾಮ ಕಳೆದ 3 ದಿನಗಳಿಂದ ರಾಜಧಾನಿಯಲ್ಲಿ ಕಸ ವಿಲೇವಾರಿ ಸ್ಥಗಿತಗೊಂಡಿದೆ. ಕಸ ಹಾಕಲು ಜಾಗ ಇಲ್ಲದ ಕಾರಣ ಕಸದ ಲಾರಿಗಳನ್ನು ರಸ್ತೆಯ ಬದಿಗಳಲ್ಲಿ ನಿಲ್ಲಿಸಲಾಗಿದೆ.

ನಗರದ ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಗಾಂಧಿನಗರ ಹಲೆವೆಡೆ ಮನೆಗಳಿಂದ ತಂದ ಕಸ ರಸ್ತೆಗಳ ಮಧ್ಯೆಯೇ ನಿಂತಿದೆ. ಇದರಿಂದ ಗಲ್ಲಿ ಗಲ್ಲಿಗಳು ಗಬ್ಬು ನಾರುತ್ತಿದೆ. ಈ ಮೂಲಕ ಮತ್ತೆ ನಗರದಲ್ಲಿ ಕಸದ ಕಾಟ ಶುರುವಾಗಿದೆ.

ಸದ್ಯ ಕಸ ವಿಲೇವಾರಿಯನ್ನು ಬೇರೆ ಕಡೆ ಮಾಡಲು ಪಾಲಿಕೆ ಬಳಿ ಸೂಕ್ತ ಪ್ಲಾನ್‍ನ ಕೊರತೆಯಿದ್ದು, ಬೆಂಗಳೂರಿನ ಜನರು ಮೂಗು ಮುಚ್ಚಿಕೊಂಡು ಓಡಾಡಲು ಸಿದ್ಧವಾಗಬೇಕಾಗಿದೆ.

198 ವಾರ್ಡ್‍ಗಳಲ್ಲೂ ಕಸದ ಲಾರಿ ರಸ್ತೆ ಬದಿಯೇ ನಿಂತಿಕೊಂಡಿದೆ. ಕನಿಷ್ಠ 2 ಕ್ಯಾಂಪ್ಯಾಕ್ಟ್ ಕಸ ಶೇಖರಣೆಯಾಗಿದ್ದು, ಕಸದ ವಾಸನೆಯಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ. ಕಸ ಹಾಕಬಾರದೆಂದು ಸ್ಥಳೀಯರು ವಿರೋಧಿಸಿದ್ದರಿಂಧ ಜನವರಿ ಅಂತ್ಯದ ವೇಳೆಗೆ ಕಸದ ಹಾಕುವ ಬೆಳ್ಳಳ್ಳಿ ಕ್ವಾರಿಯೂ ಕಸದಿಂದ ಮುಚ್ಚಲಿದೆ. ಬೆರಳೆಣಿಕೆಯ ದಿನಗಳಲ್ಲಿ ಪಾಲಿಕೆ ಬೇರೆ ಕಡೆ ಕಸ ಹಾಕಲು ಸ್ಥಳವನ್ನು ಹುಡುಕಬೇಕಾಗಿದೆ.

ಬೆಳ್ಳಳ್ಳಿ ಸ್ಥಳೀಯರು ಈ ಹಿಂದೆ ಕಸ ವಿಲೇವಾರಿ ಮಾಡಲು ವ್ಯವಸ್ಥಿತವಾಗಿ ಕ್ರಮ ತೆಗೆದುಕೊಳ್ಳಿ. ಕ್ವಾರಿ ಸುತ್ತಮುತ್ತ ದುರ್ವಾಸನೆ ತಡೆಯುವಂತೆ ಕ್ರಮ ತೆಗೆದುಕೊಳ್ಳಿ ಅಂತ ಪಾಲಿಕೆ ಅಧಿಕಾರಿ ಬಳಿ ಮನವಿ ಮಾಡಿದ್ದರು. ಆದರೂ ಕೂಡ ಪಾಲಿಕೆ ಅಧಿಕಾರಿಗಳು ನಿರ್ಲಕ್ಷಿಸಿದ್ದರಿಂದ ಸಮಸ್ಯೆ ಈಗ ಉಲ್ಬಣಗೊಂಡಿದೆ. ಸ್ಥಳೀಯರ ಪ್ರತಿಭಟನೆಯಿಂದ ಕ್ವಾರಿ ಬಳಿ 250 ಟ್ರಕ್‍ಗಳು ನಿಂತಲ್ಲೇ ನಿಂತಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *