ಬೆಳಗಾವಿಗೆ ಡ್ರಗ್ಸ್‌ ವಿತರಿಸುತ್ತಿದ್ದ ಗ್ಯಾಂಗ್‌ ಸದಸ್ಯರು ಅರೆಸ್ಟ್‌ – 50 ಕೆಜಿ ಗಾಂಜಾ, 30 ಲಕ್ಷದ ಮಾದಕ ವಸ್ತು ಜಪ್ತಿ

ಬೆಳಗಾವಿ: ಕುಂದಾನಗರಿಗೆ ಡ್ರಗ್ಸ್‌ (Drugus) ವಿತರಣೆ ಮಾಡುತ್ತಿದ್ದ ಗ್ಯಾಂಗ್‌ ಸದಸ್ಯರನ್ನು ಪೊಲೀಸರು (Police) ಬಂಧಿಸಿದ್ದಾರೆ.

ಮುಂಬೈನಲ್ಲಿದ್ದ ಕಿಂಗ್ ಪಿನ್ ಮಾಸ್ಟರ್ ಮೈಂಡ್ ಇಸ್ಮಾಯಿಲ್ ಸದ್ದಾಂ ಸಯ್ಯದ್, ತಾಜೀರ್ ಬಸ್ತವಾಡೆ, ಪ್ರಥಮೇಶ ಲಾಡ್, ತೇಜಸ್ ವಾಜರೆ, ಶಿವಕುಮಾರ್ ಆಸಬೆ, ರಮಜಾನ್ ಜಮಾದಾರ, ತಾಜೀಬ್ ಮುಲ್ಲಾ, ಅನುರಾಗ ಅರೆಸ್ಟ್‌ ಆಗಿದ್ದಾರೆ.

ಬೆಳಗಾವಿ (Belagavi) ಸಿಇಎನ್ ಇನ್ಸ್‌ಪೆಕ್ಟರ್‌ ಬಿ.ಆರ್ ಗಡ್ಡೇಕರ್ ತಂಡ ಭರ್ಜರಿ ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸಿದ್ದಾರೆ. ಕುಂದಾನಗರಿ ಕಾಲೇಜುಗಳ ವಿದ್ಯಾರ್ಥಿಗಳೇ ಟಾರ್ಗೆಟ್ ಮಾಡಿದ್ದ ಇವರು ಗಾಂಜಾ, ಪೆನ್ನಿ, ಹೇರಾಯಿನ್‌ ವಿತರಿಸುತ್ತಿತ್ತು. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಬ್ಯಾಂಕ್ ಲಾಕರ್‌ನಿಂದ ತಂದಿದ್ದ 1 ಕೆಜಿ ಚಿನ್ನ, 15 ಲಕ್ಷ ನಗದು ಕಳ್ಳರ ಪಾಲು!

 

50 ಕೆಜಿ ಗಾಂಜಾ, 30 ಲಕ್ಷ ಮೌಲ್ಯದ ಮಾದಕವಸ್ತು, 13 ಮೊಬೈಲ್, ಡಿಜಿಟಲ್ ಹ್ಯಾಂಗರ್ ತಕ್ಕಡಿ, ಎರಡು ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಒಡಿಶಾ, ಮುಂಬೈ, ಪುಣೆ, ಮಧ್ಯಪ್ರದೇಶದಿಂದ ಡ್ರಗ್ಸ್‌ ತೆಗೆದುಕೊಂಡು ಬಂದು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮತ್ತು ಗೋವಾ, ಮಹಾರಾಷ್ಟ್ರದಲ್ಲಿ ಈ ಗ್ಯಾಂಗ್‌ ವಿತರಣೆ ಮಾಡುತ್ತಿತ್ತು.

ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಅವರು ಸಿಇಎನ್ ಪೊಲೀಸ್ ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.