ಜನಜಂಗುಳಿ ಪ್ರದೇಶದಲ್ಲಿ ಹಾಡಹಗಲೇ ಗ್ಯಾಂಗ್ ಅಟ್ಯಾಕ್

ರಾಯಚೂರು: ಕ್ರೈಂ ವಿಚಾರದಲ್ಲಿ ಅಷ್ಟು ಸದ್ದು ಮಾಡದ ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದೆಡೆ ನಿಲ್ಲದ ಸರಣಿ ಕಳ್ಳತನಗಳಿಂದ ಜನ ಕಂಗೆಟ್ಟಿದ್ದರೆ, ಇನ್ನೊಂದೆಡೆ ಹಾಡಹಗಲೇ ನಗರದ ನಡುರಸ್ತೆಯಲ್ಲಿ ಗ್ಯಾಂಗ್ ಒಂದು ಯುವಕನ ಮೇಲೆ ಹಲ್ಲೆ ಮಾಡಿ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಹರಿಜನವಾಡದ ನಿವಾಸಿ ಅಭಿಷೆಕ್ ಹಲ್ಲೆಗೊಳಗಾದ ಯುವಕ. ಮುನ್ನೂರುವಾಡಿ ನಿವಾಸಿಗಳಾದ ಪವನ್, ಸಂಕೇತ್ ಸೇರಿ ಇತರರು ಹಲ್ಲೆ ಮಾಡಿದ್ದಾರೆ. ಹಳೇ ವೈಷಮ್ಯ, ಪ್ರೇಮ ಪ್ರಕರಣ ಹಲ್ಲೆಗೆ ಕಾರಣ ಎನ್ನಲಾಗಿದೆ.

ಆಗಸ್ಟ್ 28 ರಂದು ಮಧ್ಯಾಹ್ನ 2:30 ರ ಸುಮಾರಿಗೆ ನಗರದ ರಿಲಯನ್ಸ್ ಮಾರ್ಟ್ ಮುಂದೆ ನಡುರಸ್ತೆಯಲ್ಲಿ ಯುವಕನ ಮೇಲೆ ಗ್ಯಾಂಗ್ ದಾಳಿ ಮಾಡಿದೆ. ಇದರ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಈ ಘಟನೆಯಿಂದ ಜಿಲ್ಲೆಯಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಜನರಲ್ಲಿ ಅನುಮಾನ ಹುಟ್ಟುವಂತೆ ಮಾಡಿದೆ. ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಜೀವ ಬಲಿ

ಸೂಪರ್ ಮಾರ್ಕೆಟ್‌ನಿಂದ ಬೈಕ್‌ನಲ್ಲಿ ಹೊರಬಂದ ಯುವಕನನ್ನು 6-7 ಜನರ ಗುಂಪೊಂದು ಬೈಕ್‌ನಿಂದ ಕೆಳಗೆ ಬೀಳಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆತನನ್ನು ಅಜ್ಞಾತ ಸ್ಥಳಕ್ಕೆ ಹೊತ್ತೊಯ್ದ ಗ್ಯಾಂಗ್ ಅಲ್ಲಿಯೂ ಹಲ್ಲೆಮಾಡಿ, ಬಲವಂತವಾಗಿ ಬಿಯರ್ ಕುಡಿಸಿ ಕಿರುಕುಳ ನೀಡಿದ್ದಾರೆ. ಜನಜಂಗುಳಿಯಿರುವ ರಿಲಯನ್ಸ್ ಮಾರ್ಟ್ ಮುಂದೆಯೇ ಘಟನೆ ನಡೆಯುತ್ತಿದ್ದರೂ ಸಾರ್ವಜನಿಕರು ಮೂಕ ಪ್ರೇಕ್ಷಕರಾಗಿಯೇ ನೋಡುತ್ತಾ ನಿಂತಿದ್ದಾರೆ. ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ಬಗ್ಗೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ. ಓರ್ವ ಆರೋಪಿಯನ್ನು ಬಂಧಿಸಿರುವ ಸದರ ಬಜಾರ್ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪೊಲೀಸ್, ಬಿಜೆಪಿ ಮುಖಂಡನ ಹೆಸರು ಬರೆದಿಟ್ಟು, ರಮೇಶ್ ಜಾರಕಿಹೊಳಿ ಆಪ್ತ ಆತ್ಮಹತ್ಯೆ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *