ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

ಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್ ನಲ್ಲಿ ಮತ್ತೊಂದು ಹೊಸ ಸಿನಿಮಾ ಬರಲಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿ ಬ್ರೇಕ್ ಮಾಡಿತ್ತು. ಇದೀಗ ಆ ಸಿನಿಮಾದ ಟೈಟಲ್ ಲಾಂಚ್ ಗೆ ಸಿದ್ಧತೆ ನಡೆದಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ತಮ್ಮ ಹೊಸ ಸಿನಿಮಾದ ಶೀರ್ಷಿಕೆ ರಿವಿಲ್ ಮಾಡುವುದಾಗಿ ಸ್ವತಃ ಗಣೇಶ್ ಅವರೇ ಟ್ವಿಟ್ ಮಾಡಿದ್ದಾರೆ. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

‘ನವ ಸಂವತ್ಸರ ಯುಗಾದಿಯಂದು ಹೊಸ ಚಿತ್ರದ ಟೈಟಲ್ ಲಾಂಚ್. ನಾನು, ಪ್ರೀತಮ್ ಗುಬ್ಬಿ ಮುಂಗಾರು ಮಳೆಯಿಂದ ಸಿನಿ ಪಯಣದಲ್ಲಿ ಜೊತೆಯಾದವರು. ನಮ್ಮ ಜೋಡಿಯ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಮತ್ತು 99 ಚಿತ್ರಗಳನ್ನು ನೋಡಿ ತಾವು ಹರಿಸಿದ್ದೀರಿ. ಈಗ ಶ್ರೀವಾರಿ ಟಾಕೀಸ್ ನೊಂದಿಗೆ ಮತ್ತೊಂದು ಹೊಸ ಕನಸಿನ ಪಯಣ ಪ್ರಾರಂಭ. ಹರೆಯದ ಹೃದಯಗಳೇ ಹರಸಿ’ ಎಂದು ಗಣೇಶ್ ಹೊಸ ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ.

ಗಣೇಶ್ ಅವರೇ ಹೇಳಿಕೊಂಡಂತೆ ಪ್ರೀತಮ್ ಗುಬ್ಬಿ ಮತ್ತು ಗಣೇಶ್ ಸ್ನೇಹಿತರು. ಆರಂಭದ ದಿನಗಳಲ್ಲಿ ಒಟ್ಟಿಗೆ ಒಂದೇ ರೂಮ್ ನಲ್ಲಿ ಕಾಲಕಳೆದವರು. ಗಣೇಶ್ ಅವರ ಮುಂಗಾರು ಮಳೆ ಚಿತ್ರಕ್ಕೆ ಪ್ರೀತಮ್ ಕಥೆ ಬರೆದದ್ದು. ಅಲ್ಲದೇ ಗಣೇಶ್ ಜತೆಗೆ ಈವರೆಗೂ ಮೂರು ಸಿನಿಮಾಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಗೆಳೆಯನಿಗಾಗಿಯೇ ಗಣೇಶ್ ಮಳೆಯಲಿ ಜೊತೆಯಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

ಗಣೇಶ್ ಮತ್ತು ಪ್ರೀತಮ್ ಕಾಂಬಿನೇಷನ್ ನ ‘99’ ಸಿನಿಮಾದ ನಂತರ ಈ ಹೊಸ ಸಿನಿಮಾ ಲಾಂಚ್ ಆಗುತ್ತಿದೆ. ಈ ಕಾಂಬಿನೇಷನ್ ನಲ್ಲಿ ಈವರೆಗೂ ಲವ್ ಸ್ಟೋರಿಗಳನ್ನೇ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಹೊಸ ಸಿನಿಮಾದಲ್ಲೂ ಪ್ರೇಮಕಥೆಯೇ ಇರಲಿದೆ ಎನ್ನಲಾಗುತ್ತಿದೆ. ಏಪ್ರಿಲ್ 2 ರಂದು ಕೆಲವು ಸುದ್ದಿಗಳು ಹೊರ ಬೀಳಲಿವೆ.

Comments

Leave a Reply

Your email address will not be published. Required fields are marked *