ಬರೋಬ್ಬರಿ 100 ಕೆಜಿ ಚಾಕ್ಲೇಟ್‍ನಲ್ಲಿ ಮೂಡಿದ ಗಣಪ ಸಖತ್ ಫೇಮಸ್

ನವದೆಹಲಿ: ಬರೋಬ್ಬರಿ 100 ಕೆಜಿ ಬೆಲ್ಜಿಯಂ ಚಾಕ್ಲೇಟ್ ನಿಂದ ಗಣೇಶ ಮೂರ್ತಿಯನ್ನು ತಯಾರಿಸಲಾಗಿದ್ದು, ಈ ಚಾಕ್ಲೇಟ್ ಗಣೇಶ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಆಗಿದ್ದಾನೆ.

ರೆಸ್ಟೋರೆಂಟ್ ಮಾಲೀಕ ಹಾಗೂ ಚಾಕ್ಲೇಟ್ ತಯಾರಕರಾದ ಹರ್ಜಿಂದರ್ ಸಿಂಗ್ ಕುಕ್ರೇಜಾ ಅವರು ಟ್ವಿಟ್ಟರ್‍ನಲ್ಲಿ ಈ ಚಾಕ್ಲೇಟ್ ಗಣೇಶನ ಮೂರ್ತಿಯ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಈ ವಿಶೇಷ ಗಣಪ ಸದ್ಯ ಎಲ್ಲರ ಮನ ಗೆದ್ದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ತರಹದ ಗಣಪನ ಮೂರ್ತಿಗಳು ಹರಿದಾಡುತ್ತಿರುತ್ತದೆ. ಹಲವು ಡಿಫರೆಂಟ್ ಸ್ಟೈಲ್‍ನಲ್ಲಿ ಗಣಪ ಮಿಂಚುತ್ತಿರುವ ಫೋಟೋಗಳು ಸಾಮಾಜಿಕ ಜಾಕತಾಣಗಳಲ್ಲಿ ವೈರಲ್ ಆಗುತ್ತಲೇ ಇದೆ. ಈ ಸಾಲಿಗೆ ಈಗ ಚಾಕ್ಲೇಟ್ ಗಣಪ ಕೂಡ ಸೇರಿದ್ದಾನೆ. ಇದನ್ನೂ ಓದಿ:ಬರೋಬ್ಬರಿ 65 ಕೆ.ಜಿ ಚಾಕಲೇಟ್‍ನಲ್ಲಿ ಮೂಡಿದ ಗಣೇಶ

ಈ ವಿಶೇಷ ಚಾಕ್ಲೇಟ್ ಗಣಪನ ಮೂರ್ತಿಯನ್ನು ತಯಾರಿಸಲು 20 ಚೆಫ್‍ಗಳು ಸತತ 10 ದಿನಗಳ ಕಾಲ ಶ್ರಮಪಟ್ಟಿದ್ದಾರೆ. ಅಲ್ಲದೆ ಈ ಗಣಪನನ್ನು ತಯಾರಿಸಲು ಬರೋಬ್ಬರಿ 100 ಕೆಜಿಯಷ್ಟು ಬೆಲ್ಜಿಯಂ ಚಾಕ್ಲೇಟ್ ಬಳಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಇದು ಪರಿಸರ ಸ್ನೇಹಿ ಗಣಪ ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗಲ್ಲ. ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಈ ಚಾಕ್ಲೇಟ್ ಗಣಪನನ್ನು ತಯಾರಿಸಿದ್ದೇವೆ ಎಂದು ಸಿಂಗ್ ಟ್ವೀಟ್‍ನಲ್ಲಿ ಹೇಳಿಕೊಂಡಿದ್ದಾರೆ. ಸಿಂಗ್ ಅವರು ಕಳೆದ ವರ್ಷ ಕೂಡ ಚಾಕ್ಲೇಟ್ ಗಣಪನನ್ನು ತಯಾರಿಸಿ ಗಣೇಶ ಚತುರ್ಥಿಯನ್ನು ಆಚರಿಸಿದ್ದರು. ಆಗಲೂ ಕೂಡ ಅವರ ಚಾಕ್ಲೇಟ್ ಗಣಪ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡಿದ್ದ.

ಈ ವಿಶೇಷ ಪ್ರಯತ್ನಕ್ಕೆ ಹಾಗೂ ಪರಿಸರ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಫೋಟೋವನ್ನು ಸಾವಿರಾರು ಮಂದಿ ಶೇರ್ ಮಾಡಿಕೊಂಡು ಖುಷಿಪಟ್ಟಿದ್ದಾರೆ. ಕಳೆದ ವರ್ಷ ಸಿಂಗ್ ಅವರು 65 ಕೆ.ಜಿ ಚಾಕ್ಲೇಟ್ ಬಳಸಿ ಗಣೇಶ ಮೂರ್ತಿಯನ್ನು ತಯಾರಿಸಿದ್ದರು. ಆ ಗಣಪನನ್ನು ತಯಾರಿಸಲು 20 ಶೇಫ್‍ಗಳು 10 ದಿನಗಳ ಸಮಯ ತೆಗೆದುಕೊಂಡಿದ್ದರು.

Comments

Leave a Reply

Your email address will not be published. Required fields are marked *