‘ಗೇಮ್ ಚೇಂಜರ್’ ಫೋಟೋ ಲೀಕ್ : ರಾಮ್ ಚರಣ್ ಲುಕ್ ಗೆ ಫ್ಯಾನ್ಸ್ ಜೈ ಹೋ

ಗೇಮ್ ಚೇಂಜರ್ ಸಿನಿಮಾಗೆ ಒಂದಿಲ್ಲೊಂದು ಕಂಠಕ ಎದುರಾಗುತ್ತಲೇ ಇದೆ. ಇದೀಗ ರಾಮ್ ಚರಣ್ ಶೂಟಿಂಗ್ ಸ್ಪಾಟ್ ನಲ್ಲಿದ್ದ ಫೋಟೋವೊಂದು ಲೀಕ್ ಆಗಿದ್ದು, ಅವರ ಲುಕ್ (Look) ರಿವಿಲ್ ಆಗಿದೆ. ರಾಮ್ ಚರಣ್ ಲುಕ್ ಕಂಡು ಫ್ಯಾನ್ಸ್ ಸಂಭ್ರಮಸಿದ್ದಾರೆ. ಅಭಿಮಾನಿಗಳಿಗೆ ಇಂದು ಸಂಭ್ರಮದ ಸಂಗತಿಯಾದರೆ, ಚಿತ್ರತಂಡಕ್ಕೆ ಶಾಕ್ ನೀಡಿದೆ. ಎಷ್ಟೇ ಗೌಪ್ಯತೆಯನ್ನು ಕಾಪಾಡಿದರೂ, ಲೀಕ್ ಆಗುವುದನ್ನು ತಡೆಯೋಕೆ ಆಗುತ್ತಿಲ್ಲವೆಂದು ಚಿತ್ರತಂಡ ಬೇಸರ ವ್ಯಕ್ತ ಪಡಿಸಿದೆ.

ಖ್ಯಾತ ನಿರ್ದೇಶಕ ಶಂಕರ್ (Shankar) ಮತ್ತು ರಾಮ್ ಚರಣ್ ಕಾಂಬಿನೇಷನ್ ನ ಗೇಮ್ ಚೇಂಜರ್ ಸಿನಿಮಾದ ಕಥೆ ಲೀಕ್ ಆಗಿದೆ ಎನ್ನುವ ಮಾಹಿತಿಯೂ ಈ ಹಿಂದೆ ಹರಿದಾಡಿತ್ತು. ಪವನ್ ಕಲ್ಯಾಣ್ (Pawan Kalyan) ಬದುಕಿನ ಕುರಿತಾದ ಕಥೆಯು ಸಿನಿಮಾದಲ್ಲಿದ್ದು, ಪವನ್ ಕಲ್ಯಾಣ್ ಪಾತ್ರವನ್ನು ರಾಮ್ ಚರಣ್ (Ram Charan) ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತಂತೆ ಚಿತ್ರತಂಡ ಯಾವುದೇ ಮಾಹಿತಿ ಸಿಕ್ಕಿಲ್ಲ.

ಈ ನಡುವೆ ಮತ್ತೊಂದು ಸುದ್ದಿ ಸಖತ್ ಚರ್ಚೆಗೆ ಗ್ರಾಸವಾಗಿದ್ದು, ‘ಗೇಮ್ ಜೇಂಜರ್’ (Game Changer) ಸಿನಿಮಾ ಎರಡು ಭಾಗಗಳಾಗಿ ತೆರೆಯ ಮೇಲೆ ಅಬ್ಬರಿಸಲಿದೆಯಂತೆ. ಸದ್ಯ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಎಸ್. ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿತ್ತು. ಆದರೆ ಸಿನಿಮಾಗೂ ಮೈಸೂರಿಗೂ ಏನು ಲಿಂಕ್ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

‘ಬಾಹುಬಲಿ 2’ ರಿಲೀಸ್ ಆದ ಬಳಿಕ ಎರಡು ಭಾಗಗಳಲ್ಲಿ ಕಥೆ ಹೇಳುವ ಟ್ರೆಂಡ್ ಜೋರಾಗಿದೆ. ಇದೀಗ ಬಹುತೇಕ ಸ್ಟಾರ್ ನಟರ ಸಿನಿಮಾಗಳು ಎರಡು ಭಾಗಗಳಾಗಿ ಬರುತ್ತಿವೆ. ಹಾಗಾಗಿ ‘ಗೇಮ್ ಚೇಂಜರ್’ ನಿರ್ಮಾಪಕ ದಿಲ್ ರಾಜು ಎರಡು ಪಾರ್ಟ್‌ಗಳಲ್ಲಿ ಸಿನಿಮಾ ತರೋದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.