ಗಲ್ವಾನ್‌ ಬಳಿಕ ಒಲಿಂಪಿಕ್ಸ್‌ ಜ್ಯೋತಿ ವಿಚಾರದಲ್ಲೂ ಕಿರಿಕ್‌ – ಸಣ್ಣತನ ತೋರಿದ ಚೀನಾ

ಬೀಜಿಂಗ್‌: ಭಾರತದ ಗಡಿಯಲ್ಲಿ ಕಿರಿಕ್‌ ಮಾಡುತ್ತಿರುವ ಚೀನಾ(China) ಈಗ ಒಲಿಂಪಿಕ್ಸ್‌ ಜ್ಯೋತಿ ವಿಚಾರದದಲ್ಲೂ ಸಣ್ಣತನವನ್ನು ತೋರಿದೆ.

ಗಲ್ವಾನ್‌ ಘರ್ಷಣೆಯಲ್ಲಿ(Galwan Clash) ಭಾಗಿಯಾಗಿದ್ದ ಚೀನಾ ಸೇನೆಯ ಅಧಿಕಾರಿಯೊಬ್ಬರು ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಸಾಂಪ್ರದಾಯಿಕ ಜ್ಯೋತಿ ಹಿಡಿದಿದ್ದು ಈಗ ವಿಶ್ವಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ – ಕಂಪನಿಗಳಿಗೆ ಬಿಸಿ ಮುಟ್ಟಿಸಿದ ಕೇಂದ್ರ

ಪೀಪಲ್ಸ್ ಲಿಬರೇಶನ್ ಆರ್ಮಿ ರೆಜಿಮೆಂಟ್ ಕಮಾಂಡರ್ ಕೀ ಫಾಬಾವೊ(Qi Fabao) ಚಳಿಗಾಲದ ಒಲಿಂಪಿಕ್ಸ್‌ ಜ್ಯೋತಿ ಹಿಡಿದಿದ್ದಾರೆ. 2020ರ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಭಾಗಿಯಾಗಿದ್ದ ಕೀ ಫಾಬಾವೋ ತಲೆಗೆ ಗಂಭೀರ ಗಾಯವಾಗಿತ್ತು. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು

ಜ್ಯೋತಿ ಹಿಡಿದ ಕ್ವಿ ಫಾಬಾವೊರನ್ನು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ಹೀರೋ ಎಂದು ಬಣ್ಣಿಸಿದೆ. ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ನ ಜ್ಯೋತಿಯನ್ನು 1,200 ಮಂದಿ ಹಿಡಿದು ಸಾಗಲಿದ್ದಾರೆ.

ಅಮೆರಿಕ ಕಿಡಿ:
ಅಮೆರಿಕದ ವಿದೇಶಿ ಸಂಬಂಧಗಳ ಸಮಿತಿಯ ಶ್ರೇಯಾಂಕದ ಸದಸ್ಯ ಜಿಮ್ ರಿಶ್‌ ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪ್ರಸ್ತಾಪಿಸಿ ಕಿಡಿ ಕಾರಿದ್ದಾರೆ. 2020 ರಲ್ಲಿ ಭಾರತದ ಮೇಲೆ ದಾಳಿ ಮಾಡಿದ ಮಿಲಿಟರಿ ಕಮಾಂಡ್‌ನ ಭಾಗವಾಗಿರುವ ವ್ಯಕ್ತಿಯನ್ನು ಬೀಜಿಂಗ್‌ ಒಲಿಂಪಿಕ್ಸ್‌ ಜ್ಯೋತಿ ಹಿಡಿಯಲು ಆಯ್ಕೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಉಯಿಘರ್‌ ಸ್ವಾತಂತ್ರ್ಯ ಮತ್ತು ಭಾರತದ ಸಾರ್ವಭೌಮತ್ವವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಬರೆದಿದ್ದಾರೆ.

Comments

Leave a Reply

Your email address will not be published. Required fields are marked *