ಕರ್ತವ್ಯ ನಿರತರಾಗಿದ್ದ ವೇಳೆ ಗದಗ ಯೋಧ ರಾಜಸ್ಥಾನದಲ್ಲಿ ಹುತಾತ್ಮ

ಗದಗ: ಕರ್ತವ್ಯ ನಿರತವೇಳೆ ವೇಳೆ ಗದಗ ಜಿಲ್ಲೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪೆಠಾಲೂರು ಗ್ರಾಮದ 48 ವರ್ಷದ ಕಲ್ಲಪ್ಪ ಹುರಳಿ ಹುತಾತ್ಮರಾದ ಯೋಧ. ಸೇನೆಯ 375ನೇ ಬೆಟಾಲಿಯನ್‍ನವರಾದ ಕಲ್ಲಪ್ಪ ಅವರು ಕಳೆದ 14 ವರ್ಷಗಳಿಂದ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ಜೈ ಪಲ್ತಾನ್ ಲೈನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫೀಲ್ಡ್ ರೆಜಿಮೆಂಟ್ ನಲ್ಲಿ ಹವಾಲ್ದಾರ್ ಹಾಗೂ ಆಪ್‍ರೈಟರ್ ಆಗಿ ಸೇವೆಸಲ್ಲಿಸುತ್ತಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಲಪ್ಪ ಅವರು ಸೇವಾ ಅವಧಿಯನ್ನು ಪೂರ್ಣಗೊಳಿಸಿ ಮೂರು ತಿಂಗಳಿನಲ್ಲಿ ಊರಿಗೆ ಮರಳುತ್ತೇನೆ ಎಂದು ಮನೆಯ ಸದಸ್ಯರಿಗೆ ತಿಳಿಸಿದ್ದರು. ಆದರೆ ಮೂರು ತಿಂಗಳ ಸೇವೆ ಪೂರ್ಣಗೊಳಿಸಿ ಮರಳುವ ಮುನ್ನವೇ ಶವವಾಗಿ ತಾಯಿನಾಡಿಗೆ ಮರಳುತ್ತಿರುವುದು ಬೇಸರ ತಂದಿದೆ.

ಸಂಜೆ 5 ಗಂಟೆಗೆ ಕಲ್ಲಪ್ಪ ಅವರ ಮೃತ ದೇಹ ಸ್ವಗ್ರಾಮಕ್ಕೆ ಬರಲಿದ್ದು, ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

 

Comments

Leave a Reply

Your email address will not be published. Required fields are marked *