ಜಾತ್ರೆಯಲ್ಲಿ ಸೇರಿದ್ದವರಿಗೆ ಪೊಲೀಸರಿಂದ ಲಾಠಿ ಪ್ರಸಾದ!

ಗದಗ: ಲಾಕ್‍ಡೌನ್ ನಡುವೆಯೂ ಜಾತ್ರೆ ಮಾಡಲು ಬಂದ ಭಕ್ತರಿಗೆ ಪೊಲೀಸರು ಲಾಠಿ ಪ್ರಸಾದ ನೀಡಿರುವ ಘಟನೆ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮದಲ್ಲಿ ನಡೆದಿದೆ.

ಮುಶಿಗೇರಿಯಲ್ಲಿ ಮುಖಂಡರು ಗ್ರಾಮದೇವತೆ ಪೂಜಾ ಕೊನೆಯ ವಾರ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆದಿದ್ದಾರೆ.

ಜಿಲ್ಲೆಯಲ್ಲಿ ನಾಲ್ವರಿಗೆ ಕೊರೊನಾ ವೈರಸ್ ತಗುಲಿದ್ದು, ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಹೀಗಿದ್ದರೂ ಜನ ಮಾತ್ರ ಇನ್ನೂ ಬುದ್ಧಿ ಕಲಿಯುತ್ತಿಲ್ಲ. ಗ್ರಾಮ ಮಟ್ಟದ ಪಂಚಾಯಿತಿ ಅಧಿಕಾರಿಯ ನಿರ್ಲಕ್ಷ್ಯತನವೂ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಮುಶಿಗೇರಿಯಲ್ಲಿ ಮಂಗಳವಾರ ಬೆಳಗ್ಗೆ ಆಶಾ ಕಾರ್ಯಕರ್ತೆಯರನ್ನು ಗ್ರಾಮಸಭೆಗೆ ಕರೆಯದೇ ತಮ್ಮಷ್ಟಕ್ಕೆ ತಾವೇ ಸಭೆ ನಡೆಸಿದ್ದಾರೆ. ಈ ಸಭೆನಲ್ಲಿ ಗ್ರಾಮದೇವತೆ ಜಾತ್ರೆ ಬಗ್ಗೆ ಗುಪ್ತಸಭೆ ನಡೆಸಿದ್ದಾರೆ ಎನ್ನುವ ಆರೋಪ ಸಹ ಕೇಳಿಬರುತ್ತಿದೆ. ದೇವರಿಗೆ ಉಡಿತುಂಬವ ಕಾರ್ಯದ ವೇಳೆ ಜನರು ಜಮಾವಣೆಗೊಂಡಿದ್ದರು. ಗುಂಪು ಚದುರಿಸಲು ಪೊಲೀಸರು ಲಘುಲಾಠಿ ಪ್ರಸಾದ ನೀಡಿ ಕಳಿಸಿದ್ದಾರೆ. ಗ್ರಾಮದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಲಾಗಿದೆ.

Comments

Leave a Reply

Your email address will not be published. Required fields are marked *