ಸಿಎಎ ಬೆಂಬಲಿಸಿ ಗದಗದಲ್ಲಿ ಬೃಹತ್ ತಿರಂಗಾ ರ‍್ಯಾಲಿ

ಗದಗ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಗದಗದಲ್ಲಿ ವಿದ್ಯಾರ್ಥಿ ಸಂಘಟನೆಯಿಂದ ಬೃಹತ್ ತಿರಂಗಾ ರ‍್ಯಾಲಿ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಎಬಿವಿಪಿ ವಿದ್ಯಾರ್ಥಿ ಸಂಘಟನೆ ಸಹಯೋಗದಲ್ಲಿ ನಗರದ ಅನೇಕ ಕಾಲೇಜ್‍ನ ಸಾವಿರಾರು ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಭಾಗಿಯಾಗಿದ್ದರು. ನಗರದ ಕನಕದಾಸ ವೃತ್ತದಿಂದ ತೋಂಟದಾರ್ಯ ಮಠದ ವರೆಗೆ ಬೃಹತ್ ಜನಜಾಗೃತಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಸುಮಾರು 600 ಮೀಟರ್ ಉದ್ದನೆಯ ತ್ರಿವರ್ಣ ಧ್ವಜ ಹಿಡಿದು ಭಾರತಕ್ಕೆ ಜೈಘೋಷ ಕೂಗುತ್ತಾ ಪೌರತ್ವ ಜನಜಾಗೃತಿ ನಡೆಸಿದರು.

ಸಿಎಎ ಹಾಗೂ ಎನ್‌ಆರ್‌ಸಿ ಬೆಂಬಲಿಸಿ ಅಂತ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಕರಪತ್ರಗಳನ್ನ ಹಂಚಿಕೆ ಮಾಡಿದರು. ಈ ಬೃಹತ್ ರ‍್ಯಾಲಿಯಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೌರತ್ವ ಕಾಯ್ದೆ ತಿದ್ದುಪಡಿ ಮಾಡುವುದು ದೇಶದ ಹಿತರಕ್ಷಣೆಗೆ ಹೊರತು, ದೇಶದಲ್ಲಿ ಅಶಾಂತಿ ಕದಡಿಸಲಿಕಲ್ಲ. ಸಿಎಎ ಹಾಗೂ ಎನ್‌ಆರ್‌ಸಿ ಬೆಂಬಲಿಸಿ ದೇಶ ಅಭಿವೃದ್ಧಿಯತ್ತ ಮುನ್ನಡೆಸಲು ಕೈ ಜೋಡಿಸಿ ಎಂದು ಕರಪತ್ರಗಳನ್ನ ಹಂಚಿಕೆ ಮಾಡಿದರು.

Comments

Leave a Reply

Your email address will not be published. Required fields are marked *