– ಅಜ್ಜಿ ಸಂಪರ್ಕದಲ್ಲಿದ್ದ 72 ಜನರ ವರದಿ ನೆಗೆಟಿವ್
ಗದಗ: ನಗರದಲ್ಲಿ ಕೊರೊನಾ ಸೋಂಕಿತ 80 ವರ್ಷದ ವೃದ್ಧೆಯ ಸಾವಿನ ಪ್ರಕರಣ, ಸೋಂಕಿನ ಮೂಲ ಜಿಲ್ಲಾಡಳಿತಕ್ಕೆ ಕಗ್ಗಂಟಾಗಿದೆ.
ಅಜ್ಜಿ ಸಂಪರ್ಕದಲ್ಲಿದ್ದ 72 ಜನರ ವರದಿ ನೆಗೆಟಿವ್ ಬಂದಿದೆ. ಆದ್ದರಿಂದ ಅಜ್ಜಿಗೆ ಸೋಂಕು ಹೇಗೆ ತಗುಲಿತು ಎಂಬ ಪ್ರಶ್ನೆ ಕಾಡತೊಡಗಿದೆ. ಮೃತ ಅಜ್ಜಿ ಸಂಪರ್ಕದಲ್ಲಿದ್ದ ಜನರನ್ನು ಈಗ 2ನೇ ಹಂತದ ಥ್ರೋಟ್ ಸ್ವ್ಯಾಬ್ ಪರೀಕ್ಷೆ ಒಳಪಡಿಸಲಾಗುತ್ತಿದೆ. ಇಂದು ನಗರದ ಎಸ್.ಎಂ.ಕೃಷ್ಣಾ ಕಾಲೋನಿಯ 21 ಜನರನ್ನು ಜಿಮ್ಸ್ ಆಸ್ಪತ್ರೆಗೆ ಕರೆದೊಯಲಾಯಿತು. ಇದನ್ನೂ ಓದಿ: ಕೊರೊನಾಗೆ ರಾಜ್ಯದ 9 ಮಂದಿ ಬಲಿ: ಸೋಂಕು ಬಂದಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

ಮೃತ ಸೋಂಕಿತ ವೃದ್ಧೆ ಕಳೆದ ಮಾರ್ಚ್ 23ರಂದು ಎಸ್.ಎಂ.ಕೃಷ್ಣಾ ಕಾಲೋನಿಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ನಂತರ ಬೇರೆಲ್ಲೂ ಹೊಗಿರಲಿಲ್ಲ. ಆದ್ದರಿಂದ ಅಜ್ಜಿ ಸೋಂಕಿನ ಮೂಲ ಪತ್ತೆಗಾಗಿ 2ನೇ ಹಂತದ ಥ್ರೋಟ್ ಸ್ವ್ಯಾಬ್ ಪಡೆದ ಬಳಿಕ ಅವರನ್ನು ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಆರೋಗ್ಯ ಇಲಾಖೆ ಎಸ್.ಎಂ.ಕೃಷ್ಣಾ ಕಾಲೋನಿಯ 200ಕ್ಕೂ ಅಧಿಕ ಜನ್ರ ಗುರುತಿಸಿದ್ದು, ಹಂತ ಹಂತವಾಗಿ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.

Leave a Reply