ಬೆಂಗಳೂರು: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಶುಕ್ರವಾರ ಬೆಳಗ್ಗೆ ದಾಸರಹಳ್ಳಿ ಬಿಬಿಎಂಪಿ ಕಚೇರಿಗೆ ಧಿಡೀರ್ ಭೇಟಿ ನೀಡಿ, ಅಧಿಕಾರಿಗಳ ಹಾಜರಾತಿ ಪರಿಶೀಲನೆ ಮಾಡಿದ್ದಾರೆ. ಬಯೋಮೆಟ್ರಿಕ್ ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದನ್ನು ಗಮನಿಸಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಕಚೇರಿ ಸಮಯ ಪ್ರಾರಂಭವಾಗಿ ಮುಕ್ಕಾಲು ಗಂಟೆ ಕಳೆದರೂ ಅಧಿಕಾರಿಗಳು ಗೈರಾಗಿದ್ದರು. ಅಷ್ಟೇ ಅಲ್ಲ ಜಂಟಿ ಆಯುಕ್ತ ಮತ್ತು ಎಂಜಿನಿಯರ್‍ಗಳು ಇರಲಿಲ್ಲ. ಹಲವು ಸಿಬ್ಬಂದಿ ಕಚೇರಿಗೆ ಆಗಮಿಸಿರಲಿಲ್ಲ. ಎಲ್ಲವನ್ನೂ ಗಮನಿಸಿದ ಪರಮೇಶ್ವರ್ ಅವರು, ಸಮಯಪ್ರಜ್ಞೆ ಇಲ್ಲದ ಹಾಗೂ ಅಶಿಸ್ತು ತೋರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಆದೇಶಿಸುವುದಾಗಿ ತಿಳಿಸಿದರು.

ಅಧಿಕಾರಿಗಳು ಹಾಗೂ ಸ್ಥಳೀಯ ಬಿಬಿಎಂಪಿ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ದಾಖಲೆಗಳ ಪರಿಶೀಲನೆ ನಡೆಸಿ, 2014ರಿಂದ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply