ಎಲೆಕ್ಷನ್ ಬಂದಾಗ ನಾವು ನೆನಪಾದ್ವಾ – ವಾಟ್ಸಪ್ ಗ್ರೂಪಲ್ಲಿ ಮೈಸೂರು ಶಾಸಕನಿಗೆ ಫುಲ್ ಕ್ಲಾಸ್

ಮೈಸೂರು: ಕ್ಷೇತ್ರದ ಮತದಾರರ ಸಮಸ್ಯೆ ಆಲಿಸಲು ಗ್ರೂಪ್ ಮಾಡಿ ಕಾಂಗ್ರೆಸ್ ಶಾಸಕರೊಬ್ಬರು ಪೇಚಿಗೆ ಸಿಲುಕಿದ್ದಾರೆ. ವಾಟ್ಸಪ್ ಗ್ರೂಪ್ ನಲ್ಲಿ ಶಾಸಕರಿಗೆ ಮತದಾರರು ಹಿಗ್ಗಾಮುಗ್ಗಾ ತರಾಟೆ ತೆಗೆದು ಕೊಂಡಿದ್ದಾರೆ.

ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಯಾಕಾದರೂ ತಾನೂ ವಾಟ್ಸಪ್ ಗ್ರೂಪ್ ರಚನೆ ಮಾಡಿದ್ದಿನೋ ಅನ್ನೋ ಪರಿಸ್ಥಿತಿಗೆ ಸಿಲುಕಿದ್ದಾರೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಶಾಸಕ ಎಂ.ಕೆ. ಸೋಮಶೇಖರ್ `MLA ಕೆಆರ್ ಕ್ಷೇತ್ರ ಪಬ್ಲಿಕ್ 7′ ಎಂಬ ಹೆಸರಿಸಲ್ಲಿ ಗ್ರೂಪ್ ರಚನೆ ಮಾಡಿದ್ದಾರೆ.

 

ಕ್ಷೇತ್ರದ ಮತದಾರರನ್ನು ಒಳಗೊಂಡಂತೆ ವಾಟ್ಸಪ್ ಗ್ರೂಪ್ ರಚಿಸಲಾಗಿದೆ. ಗ್ರೂಪ್ ರಚನೆಯಾಗ್ತಿದಂತೆ ಶಾಸಕರಿಗೆ ಬೈಗುಳದ ಸುರಿಮಳೆ ಸುರಿಯುತ್ತಿದೆ. ಬಾಯಿಗೆ ಬಂದ ಯಾವ ಬೈಗುಳಗಳನ್ನು ಜನರು ಬಿಡದೆ ಶಾಸಕರಿಗೆ ಬೈಯುತ್ತಿದ್ದಾರೆ. ಎಲೆಕ್ಷೆನ್ ಹತ್ರಾ ಬಂತಾ ಈಗ. ಈ ಈಡಿಯಟ್ ಗ್ರೂಪ್.! ರಚನೆ ಮಾಡಿದ್ದೀರಾ…? ಎಂದು ಬಾಯಿಗೆ ಬಂದಂತೆ ಪ್ರಶ್ನೆ ಮಾಡಿ ಶಾಸಕರಿಗೆ ಬೈಯುತ್ತಿದ್ದಾರೆ.

ಗ್ರೂಪ್ ನ ಒಬ್ಬ ಸದಸ್ಯ ಕೀಟಲೆ ಮಾಡೋ ಸಲುವಾಗಿ ಗ್ರೂಪ್ ಡಿಪಿಗೆ ಪ್ರಧಾನಿ ಮೋದಿ ಭಾವಚಿತ್ರ ಹಾಕಿದ್ದಾರೆ. ಮತದಾರರ ಈ ಬೈಗುಳಕ್ಕೆ ಶಾಸಕರದು ಮೌನವೇ ಉತ್ತರವಾಗಿದೆ.

Comments

Leave a Reply

Your email address will not be published. Required fields are marked *