ಡಚ್ಚರ ವಿರುದ್ಧ ಬಾಂಗ್ಲಾಕ್ಕೆ ಹೀನಾಯ ಸೋಲು – ತನ್ನ ಶೂನಿಂದ ತಾನೇ ಹೊಡೆದುಕೊಂಡ ಅಭಿಮಾನಿ

ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್‌ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಬಲಿಷ್ಠ ಬ್ಯಾಟಿಂಗ್‌, ಬೌಲಿಂಗ್‌ ಪಡೆ ಹೊಂದಿದ್ದರೂ ಹೀನಾಯ ಸೋಲನುಭವಿಸಿತು. ನೆದರ್ಲೆಂಡ್ಸ್ ತಂಡವು ಬಾಂಗ್ಲಾದೇಶದ ವಿರುದ್ಧ 87 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಬಾಂಗ್ಲಾದೇಶ, ನೆದರ್ಲೆಂಡ್ಸ್‌ಗೆ ಶರಣಾಗುತ್ತಿದ್ದಂತೆ ಕೋಲ್ಕತ್ತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ಬಾಂಗ್ಲಾದೇಶದ ಅಭಿಮಾನಿಯೊಬ್ಬ ಬಾಯಿಗೆ ಬಂದಂತೆ ಬೈದುಕೊಂಡು, ತನ್ನ ಶೂನಿಂದ ತಾನೇ ಹೊಡೆದುಕೊಂಡಿದ್ದಾನೆ. ಈ ಮೂಲಕ ತನ್ನ ಆಕ್ರೋಶ ಹೊರಹಾಕಿದ್ದು, ಈ ದೃಶ್ಯದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: World Cup 2023: 18,000 ರನ್‌ ಪೂರೈಸಿ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ ಹಿಟ್‌ಮ್ಯಾನ್‌

ಈ ವೀಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಅಭಿಮಾನಿ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾನೆ. ನಿಜವಾಗಿಯೂ ಇದು ದುಃಖಕರ ಮತ್ತು ನಾಚಿಗೇಡಿನ ಸಂಗತಿ. ಬಲಿಷ್ಠ ತಂಡಗಳೊಂದಿಗೆ ಆಡುವಾಗ ಸೋಲುವುದರಲ್ಲಿ ಸಮಸ್ಯೆಯಿಲ್ಲ. ಆದ್ರೆ ನೆದರ್ಲೆಂಡ್ಸ್‌ ವಿರುದ್ಧವೂ ಸೋಲುತ್ತೀರಿ ಅಂದ್ರೆ ನಾಚಿಕೆ ಆಗಬೇಕು. ಅಷ್ಟು ದೂರದಿಂದ ಬಂದು, ಮುಂಚಿತವಾಗಿಯೇ ದುಪ್ಪಟ್ಟು ದರ ನೋಡಿ ಹೋಟೆಲ್‌ ಬುಕ್ಕಿಂಗ್‌ ಮಾಡಿಕೊಂಡು ಬಂದಿದ್ದೇವೆ. ಆದ್ರೆ ಈ ರೀತಿ ಹೀನಾಯ ಸೋಲು ನೋಡುವುದಕ್ಕಿಂತ ನಮ್ಮ ಶೂನಲ್ಲಿ ನಾವೇ ಹೊಡೆದುಕೊಳ್ಳುವುದು ಉತ್ತಮ ಎಂದು ಕಿಡಿ ಕಾರಿದ್ದಾರೆ. ಬಳಿಕ ಶೂನಿಂದ ಹೊಡೆದುಕೊಂಡು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಸಂಘಟಿತ ಬೌಲಿಂಗ್ ದಾಳಿ ಹಾಗೂ ನಾಯಕ ಸ್ಕಾಟ್ ಎಡ್ವರ್ಡ್ಸ್ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ನೆದರ್ಲೆಂಡ್ಸ್ ತಂಡವು ಬಾಂಗ್ಲಾದೇಶದ ವಿರುದ್ಧ 87 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಅಲ್ಲದೇ ಅಂಕಪಟ್ಟಿಯಲ್ಲೂ ಬಾಂಗ್ಲಾದೇಶ ಹಾಗೂ ಬಲಿಷ್ಠ ಇಂಗ್ಲೆಂಡ್‌ ತಂಡವನ್ನ ಹಿಂದಿಕ್ಕಿದೆ. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

ಮೊದಲು ಬ್ಯಾಟಿಂಗ್‌ ಮಾಡಿದ್ದ ನೆದರ್ಲೆಂಡ್ಸ್ 50 ಓವರ್‌ಗಳಲ್ಲಿ 229 ರನ್‌ಗಳಿಗೆ ಆಲೌಟ್ ಆಗಿತ್ತು. 230 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ 42.2 ಓವರ್‌ಗಳಲ್ಲೇ 142 ರನ್ ಗಳಿಗೆ ಸರ್ವಪತನ ಕಂಡಿತು. ನಾಯಕ ಶಕೀಹ್‌ ಅಲ್‌ ಹಸನ್‌ ಸೇರಿದಂತೆ ಪ್ರಮುಖ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದ ಬಾಂಗ್ಲಾದೇಶ ಸೋಲಿನ ಸುಳಿಯಲ್ಲಿ ಸಿಲುಕಿತ್ತು.‌ ಇದನ್ನೂ ಓದಿ: World Cup 2023: ಮಾರಕ ಬೌಲಿಂಗ್‌ ದಾಳಿಗೆ ತಿಣುಕಾಡಿದ ಭಾರತ – ಇಂಗ್ಲೆಂಡ್‌ಗೆ 230 ರನ್‌ ಗುರಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]