ಚುನಾವಣಾ ಆಯೋಗದ ಹೊಸ ರೂಲ್ಸ್ ಗೆ ಜನಸಾಮಾನ್ಯರು, ಬ್ಯಾಂಕ್‍ನವರು ಸುಸ್ತು!

-ಕಟ್ಟೆಚ್ಚರದ ನಡುವೆಯೂ ಚುನಾವಣಾ ಅಕ್ರಮ

ಬೆಂಗಳೂರು: ರಾಜಕೀಯ ಕುಳಗಳ ಅಕ್ರಮ ಹಣದ ಹರಿವಿಗೆ ಬ್ರೇಕ್ ಹಾಕಲು ಚುನಾವಣಾ ಆಯೋಗ ಮತ್ತೆ ಚಾಣಕ್ಯ ತಂತ್ರ ಅನುಸರಿಸಿದೆ. ಇಲ್ಲಿಯವರೆಗೆ ಹತ್ತು ಲಕ್ಷ ದುಡ್ಡು ಡ್ರಾ ಮಾಡಿದವರ ವಿವರವನ್ನು ಬ್ಯಾಂಕ್ ಅಧಿಕಾರಿಗಳಿಂದ ಕಲೆ ಹಾಕುತ್ತಿದ್ದ ಆಯೋಗ ಈಗ ಈ ಪ್ರಮಾಣವನ್ನು ಎರಡು ಲಕ್ಷದಿಂದ ಶುರು ಮಾಡಿದೆ.

ಇನ್ಮುಂದೆ ಎರಡು ಲಕ್ಷಕ್ಕಿಂತ ಅಧಿಕ ದುಡ್ಡು ಪಡೆದವರ ಎಲ್ಲಾ ವಿವರವೂ ಐಟಿ ಹಾಗೂ ಎಲೆಕ್ಷನ್ ಕಮೀನಷನ್‍ಗೆ ಸಲ್ಲಿಕೆಯಾಗಲಿದೆ. ಈಗಾಗಲೇ ಬ್ಯಾಂಕ್ ಅಧಿಕಾರಿಗಳಿಗೆ ಸುತ್ತೋಲೆ ನೀಡಿದ್ದು ಇಂದಿನಿಂದ ಮಾಹಿತಿ ರವಾನೆಯಾಗಲಿದೆ. ಚುನಾವಣಾ ಆಯೋಗ ಅಕ್ರಮ ದುಡ್ಡು ಸಾಗಾಟ ತಡೆಗೆ ಎಷ್ಟೇ ಪ್ರಯತ್ನ ಪಟ್ರು, ಚೆಕ್‍ಪೋಸ್ಟ್ ನಲ್ಲಿ ಮಾತ್ರ ನಿತ್ಯ ಕೋಟಿ ಕೋಟಿ ದುಡ್ಡು ಪತ್ತೆಯಾಗುತ್ತಿರೋದ್ರಿಂದ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಈ ನಡುವೆ ಜನಸಾಮಾನ್ಯರಿಗೆ ಬ್ಯಾಂಕ್‍ನಲ್ಲಿ ದುಡ್ಡು ಸಿಗದೇ ಇರೋದ್ರ್ರಿಂದ ಮದುವೆ, ಫಂಕ್ಷನ್, ಗೃಹಪ್ರವೇಶ ಸೇರಿದಂತೆ ಎಲ್ಲಾ ಶುಭ ಸಮಾರಂಭಗಳನ್ನು ಮುಂದೂಡುವ ಪರಿಸ್ಥಿತಿ ಬಂದಿದೆ. ಇನ್ನು ಬ್ಯಾಂಕ್‍ನವರು ಕೂಡ ಆರ್‍ಬಿಐ ದುಡ್ಡು ವಿತರಣೆ ಮಾಡುತ್ತಿಲ್ಲ. ಆದ್ದರಿಂದ ಜನರಿಗೆ ದುಡ್ಡು ನೀಡೋದಕ್ಕೆ ಆಗ್ತಿಲ್ಲ. ಒಂದು ಲಕ್ಷ ಕೇಳಿದ್ರೇ ಹಂತಹಂತವಾಗಿ ದುಡ್ಡು ವಿತರಿಸುತ್ತೇವೆ ಅಂತ್ತಿದ್ದಾರಂತೆ.

Comments

Leave a Reply

Your email address will not be published. Required fields are marked *