ಗಮನಿಸಿ, ಬೆಂಗ್ಳೂರಿನಿಂದ ಸಕಲೇಶಪುರದವರೆಗೂ ಈಗ ರೈಲಿನಲ್ಲಿ ಸಂಚರಿಸಬಹುದು

ಹಾಸನ: ಆಗಸ್ಟ್ ತಿಂಗಳಿನಲ್ಲಿ ಬಿದ್ದ ಭಾರೀ ಮಳೆಯಿಂದ ಭೂ ಕುಸಿತ ಸಂಭವಿಸಿ ಸ್ಥಗಿತಗೊಂಡಿದ್ದ ಹಾಸನ ಸಕಲೇಶಪುರ ರೈಲು ಸಂಚಾರ ಪುನಃ ಆರಂಭವಾಗಿದೆ.

ರೈಲ್ವೆ ಮಾರ್ಗದ ಮೇಲೆ ಕಲ್ಲು ಬಂಡೆ ಮತ್ತು ಗುಡ್ಡಗಳನ್ನು ತೆರವುಗೊಳಿಸಲಾಗಿದೆ. ಈಗ ಸಕಲೇಶಪುರದವರೆಗಿನ ಮಾರ್ಗವನ್ನು ದುರಸ್ತಿ ಮಾಡಲಾಗಿದೆ. ಹೀಗಾಗಿ ಬೆಂಗಳೂರಿನಿಂದ ಸಕಲೇಶಪುರಕ್ಕೆ ರೈಲು ಸಂಚಾರ ಆರಂಭಗೊಂಡಿದೆ. ಸೋಮವಾರ ರಾತ್ರಿ ಒಂದು ರೈಲು ಆಗಮಿಸಿದ್ದರೆ, ಮಂಗಳವಾರ ಮತ್ತೊಂದು ರೈಲು ಸಕಲೇಶಪುರದತ್ತ ಹೊರಟಿದೆ.

ವಿಪರೀತ ಮಳೆ ಸುರಿದ ಪರಿಣಾಮ ತೆರವು ಕಾರ್ಯಕ್ಕೆ ಅಡ್ಡಿಯಾಗಿತ್ತು. ಸಕಲೇಶಪುರದಿಂದ ಸುಬ್ರಹ್ಮಣ್ಯ(ನೆಟ್ಟಣ) ನಿಲ್ದಾಣದವರೆಗಿನ ಮಾರ್ಗದಲ್ಲಿ ಇನ್ನು ಗುಡ್ಡ ಮತ್ತು ಬಂಡೆ ಕಲ್ಲುಗಳಿವೆ. ಇವುಗಳ ದುರಸ್ತಿ ಪೂರ್ಣಗೊಂಡ ಬಳಿಕ ಮಂಗಳೂರು- ಬೆಂಗಳೂರು ರೈಲು ಸಂಚಾರ ಮತ್ತೆ ಆರಂಭವಾಗಲಿದೆ. ಈಗ ಇರುವ ಪರಿಸ್ಥಿತಿಯೇ ಹೀಗೆಯೇ ಮುಂದುವರಿದರೆ ಅಕ್ಟೋಬರ್ ಮಧ್ಯ ಭಾಗ ಅಥವಾ ಕೊನೆಯಲ್ಲಿ ಸಕಲೇಶಪುರ- ಸುಬ್ರಹ್ಮಣ್ಯ ಮಧ್ಯೆ ರೈಲು ಸಂಚರಿಸುವ ಸಾಧ್ಯತೆಯಿದೆ. ಒಂದು ವೇಳೆ ಮತ್ತೆ ಮಳೆ ಸುರಿದರೆ ತೆರವು ಕಾರ್ಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *