ಆಸ್ಪತ್ರೆ ಕಟ್ಟಿಸಿ ಕೊಡ್ತೀನೆಂದು ಮಾತು ಕೊಟ್ಟು ಸೆಕ್ಸ್- ವೈದ್ಯೆಗೆ 1.80 ಕೋಟಿ ರೂ. ವಂಚನೆ

ಭೋಪಾಲ್: ಆಸ್ಪತ್ರೆ ತೆರೆಯುವ ನೆಪದಲ್ಲಿ ಕಿರಾತಕನೊಬ್ಬ ಮಹಿಳಾ ವೈದ್ಯರೊಂದಿಗೆ ಸ್ನೇಹ ಮಾಡಿಕೊಂಡು ಅಶ್ಲೀಲ ವೀಡಿಯೋ ಮಾಡಿ ಕೋಟ್ಯಂತರ ರೂ. ವಸೂಲಿ ಮಾಡಿದ ಘಟನೆ ಮಧ್ಯಪ್ರದೇಶದ ದಿಂಡೋರಿಯಲ್ಲಿ ನಡೆದಿದೆ.

ಆರೋಪಿಯನ್ನು ಮನೀಶ್ ಶ್ರೀವಾಸ್ತವ್ ಎಂದು ಗುರುತಿಸಲಾಗಿದ್ದು, ಈತ ಜಬಲ್‍ಪುರದ ನಿವಾಸಿ. ಆರೋಪಿಯು ದಿಂಡೋರಿಯಲ್ಲಿ ಆಸ್ಪತ್ರೆ ತೆರೆಯುವ ನೆಪದಲ್ಲಿ ವೈದ್ಯೆಯನ್ನು ದೋಸ್ತಿ ಮಾಡಿಕೊಂಡಿದ್ದಾನೆ. ನಂತರ ಅವರನ್ನು ಪ್ರೇಮದ ಜಾಲಕ್ಕೆ ಬಿಳಿಸಿಕೊಂಡು ಅವರ ಮೇಲೆ ಅತ್ಯಾಚಾರ ಎಸಗಿ ವೀಡಿಯೋ ಮಾಡಿದ್ದಾನೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ಕನಿಷ್ಟ 12 ಮಂದಿ ಪತ್ರಕರ್ತರ ಹತ್ಯೆ

ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಅವರಿಂದ ಕೋಟ್ಯಂತರ ರೂ. ವಸೂಲಿ ಮಾಡಿದ್ದಾನೆ. ಹಾಗೆಯೇ ಆರೋಪಿಯು ಸಂತ್ರಸ್ತೆಗೆ ಇನ್ನೂ ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದ್ದನು. ಮಹಿಳೆಯು ಹೆಚ್ಚಿನ ಹಣ ನೀಡಲು ನಿರಾಕರಿಸಿದಾಗ ಆರೋಪಿ ಮನೀಶ್ ಭೋಪಾಲ್ ಮೂಲದ ಸ್ನೇಹಿತ ಕುಲಭೂಷಣ್‍ನನ್ನು ಐಬಿಯ ನಕಲಿ ಅಧಿಕಾರಿಯನ್ನಾಗಿ ಮಾಡಿ ಬೆದರಿಸಿ ಹಣ ದೋಚಿದ್ದಾನೆ ಎಂದು ತಿಳಿದು ಬಂದಿದೆ.

STOP RAPE

ಅತ್ಯಾಚಾರಗೈದ ವೀಡಿಯೋ ಮತ್ತು ಫೋಟೋಗಳನ್ನು ಆರೋಪಿಯು ವೈದ್ಯೆಯ ಪತಿಗೆ ಕಳುಹಿಸುವುದಾಗಿ ಧಮ್ಕಿ ಹಾಕಿದ್ದು ಅವರಿಂದ 1 ಕೋಟಿ 80 ಲಕ್ಷ ರೂ. ದೋಚಿದ್ದಾನೆ. ಇದರ ಮೇಲಾಗಿಯೂ ಇಬ್ಬರೂ ಯುವಕರು ವೈದ್ಯೆ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಇದರಿಂದ ಬೇಸರಗೊಂಡ ಅವರು ಸಿಟಿ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

ಪೊಲೀಸರು ಆರೋಪಿ ಮನೀಶ್ ಮತ್ತು ಕುಲಭೂಷಣ್ ಇಬ್ಬರ ವಿರುದ್ಧವೂ ಸೆಕ್ಷನ್ 376 (ಅತ್ಯಾಚಾರ), 386 (ಸುಲಿಗೆ), 429 (ದುಷ್ಕೃತ್ಯ), 506 (ಬೆದರಿಕೆ)ಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *