– ಸಾವಿನ ಕೊನೆ ಕ್ಷಣಗಳು ಮೊಬೈಲಿನಲ್ಲಿ ಸೆರೆ
ಕಲಬುರಗಿ: ತನ್ನ ಕಣ್ಣಮುಂದೆಯೇ ಸ್ನೇಹಿತ ನೀರಿನಲ್ಲಿ ಮುಳುಗುವುದನ್ನು ಕಂಡು ಸ್ನೇಹಿತರು ಗಾಬರಿಯಾಗಿದ್ದು, ಬದುಕಿಸುವಲ್ಲಿ ಅಸಹಾಯಕರಾದ ಪ್ರಸಂಗವೊಂದು ನಡೆದಿದೆ.
ಕಲಬುರಗಿ ಪಟ್ಟಣದ ಹೊರವಲಯದಲ್ಲಿನ ರಾಣೇಶಪೀರ್‍ದರ್ಗಾ ಬಳಿಯ ಕಲ್ಲು ಕ್ವಾರಿಯಲ್ಲಿ ಘಟನೆ ನಡೆದಿದೆ. ಜಾಫರ್(22) ನೀರಲ್ಲಿ ಮುಳುಗಿ ಮೃತ ಯುವಕ. ಸಾವಿನ ಕೊನೆ ಕ್ಷಣಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಯುವಕ ಜಾಫರ್ ನೀರಲ್ಲಿ ಮುಳುಗಿ ಸಾಯುವ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ. ತನ್ನ ಕಣ್ಣಮುಂದೆ ಸ್ನೇಹಿತ ನೀರಲ್ಲಿ ಮುಳಗುವುದನ್ನೂ ಕಂಡರೂ ಬದುಕಿಸಲಾಗದ ಸ್ಥಿತಿಯಲ್ಲಿ ಸ್ನೇಹಿತನಿದ್ದನು.

ಕಲಬುರಗಿ ನಗರದ ಮಿಜಗುರಿ ಬಡಾವಣೆ ನಿವಾಸಿ ಜಾಫರ್, ಶುಕ್ರವಾರ ಸಂಜೆ ಸ್ನೇಹಿತರ ಜೊತೆ ಸೇರಿ ಕಲ್ಲು ಕಣಿಯಲ್ಲಿ ಈಜಲು ಹೋಗಿದ್ದ. ಸುಮಾರು ಹೊತ್ತು ಸ್ನೇಹಿತರೆಲ್ಲ ಸೇರಿ ಈಜಾಡಿದ್ದಾರೆ. ಅದೆಲ್ಲವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಲಾಗಿದೆ. ಕೊನೆಗೆ ಮತ್ತೆ ನೀರಿಗೆ ಜಿಗಿದ ಜಾಫರ್, ಒಂದು ನಿಮಿಷ ಈಜಿ ದಡಕ್ಕೆ ಬರಲು ಪ್ರಯತ್ನಿಸುತ್ತಿದ್ದ. ದಣಿವಾಗಿ ದಡಮುಟ್ಟಲು ಬರುತ್ತಾನೆ. ದಡದತ್ತ ಬರುತ್ತಿದ್ದಾನೆ ಎಂದು ಸ್ನೇಹಿತರು ಸುಮ್ಮನಾಗಿದ್ದಾರೆ.
ಆದರೆ ಅಷ್ಟರೊಳಗಾಗಿ ಜಾಫರ್ ನೀರು ಪಾಲಾಗಿ ಮೃತಪಟ್ಟಿರುತ್ತಾನೆ. ಈ ಎಲ್ಲ ಘಟನೆ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply