ಬೆಂಗಳೂರು: ಹಬ್ಬದ (Festival) ದಿನ ಮನೆಯಲ್ಲಿ ನಾನ್‌ವೆಜ್ (Nonveg) ತಿಂದಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಚಿಕ್ಕಜಾಲದಲ್ಲಿ (Chikkajala) ನಡೆದಿದೆ.
ಅಸ್ಸಾಂ ಮೂಲದ ರಾಜೇಶ್ ಕೊಲೆಯಾದ ಯುವಕ. ಬಿಹಾರ ಮೂಲದ ಶಂಭೂ ಎಂಬಾತನಿಂದ ಕೃತ್ಯ ನಡೆದಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಇಬ್ಬರು ಕೂಡ ಗಾರೇ ಕೆಲಸ ಮಾಡಿಕೊಂಡಿದ್ದರು. ಬಿಹಾರದಲ್ಲಿ ದೀಪಾವಳಿ ಹಬ್ಬದ ಮುಗಿದ ತಕ್ಷಣ ಛತ್ ಪೂಜೆ ಹಬ್ಬ ಮಾಡುತ್ತಾರೆ. ಈ ವೇಳೆ ಯಾವುದೇ ನಾನ್‌ವೆಜ್ ತಿನ್ನುವಂತಿಲ್ಲ. ಅದರಂತೆ ಶಂಭೂ ಕೂಡ ಎರಡು ದಿನದಿಂದ ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಿದ್ದ. ಇದನ್ನೂ ಓದಿ: ಯೋಗೀಶ್‌ಗೌಡ ಕೊಲೆ ಸಾಕ್ಷ್ಯನಾಶ ಕೇಸ್- ಸುಪ್ರೀಂನಲ್ಲಿ ವಿನಯ್ ಕುಲಕರ್ಣಿಗೆ ಹಿನ್ನಡೆ
ಸೋಮವಾರ ಹಬ್ಬದ ಪ್ರಮುಖ ದಿನವಾಗಿದೆ. ಆದರೆ ಶಂಭೂ ಪೂಜೆ ಮಾಡಿ ಹೊರಗೆ ಹೋಗಿದ್ದ ವೇಳೆ ಜೊತೆಗೆ ವಾಸವಿದ್ದ ರಾಜೇಶ್, ಹೊರಗಿನಿಂದ ನಾನ್‌ವೆಜ್ ತಂದು ಮನೆಯಲ್ಲೇ ತಿಂದಿದ್ದಾನೆ. ಈ ವಿಚಾರ ತಿಳಿದ ಶಂಭೂ ಜೊತೆಗೆ ವಾಸವಿದ್ದ ರಾಜೇಶ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದು, ಈ ಗಲಾಟೆಯಲ್ಲಿ ರಾಜೇಶ್‌ಗೆ ಗಂಭೀರ ಸ್ವರೂಪದ ಗಾಯವಾಗಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಪೊಲೀಸರು, ಆರೋಪಿ ಶಂಭೂವನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಲ್ಲಂಗದಾಟಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಮಗಳ ಹತ್ಯೆ – ಮಲತಂದೆ ಅರೆಸ್ಟ್
