ಮಾತುಕತೆಗೆ ಕರೆದು ಸ್ನೇಹಿತನ ಮೇಲೆಯೇ ಶೂಟ್ ಮಾಡ್ದ!

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸ್ನೇಹಿತನ ಮೇಲೆ ಫೈರಿಂಗ್ ಮಾಡಿರುವ ಘಟನೆ ನಗರದ ಕೋಣನಕುಂಟೆ ಕ್ರಾಸ್‍ನಲ್ಲಿ ಮಂಗಳವಾರ ನಡೆದಿದೆ.

ಕೊಣನಕುಂಟೆ ನಿವಾಸಿ ಸಿದ್ಧಾರ್ಥ್ ಫೈರಿಂಗ್ ಮಾಡಿದ ಆರೋಪಿ. ಪ್ರಹ್ಲಾದ್ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಸ್ನೇಹಿತ. ಪ್ರಹ್ಲಾದ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೋರ್ ವೇಲ್ ಹಾಕಿಸುವ ಕೆಲಸವನ್ನು ಸಿದ್ಧಾರ್ಥ್ ಮಾಡುತ್ತಿದ್ದ. ಆತನಿಂದ ಪ್ರಹ್ಲಾದ್ ತಮ್ಮ ಮನೆಯ ಮುಂದೆ 70 ಸಾವಿರ ರೂ. ವೆಚ್ಚದಲ್ಲಿ ಬೋರ್ ಹಾಕಿಸಿದ್ದು, ಹಣ ನೀಡದೇ ಸತಾಯಿಸುತ್ತಿದ್ದ. ಇದರಿಂದಾಗಿ ಕೊಪಗೊಂಡಿದ್ದ ಸಿದ್ಧಾರ್ಥ್, ತನ್ನನ್ನು ಭೇಟಿಯಾಗುವಂತೆ ಪ್ರಹ್ಲಾದ್ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ಧಾರ್ಥ್ ತಿಳಿಸಿದಂತೆ ಹಣದ ವಿಚಾರವಾಗಿ ಮಾತುಕತೆ ನಡೆಸಲು ಮಂಗಳವಾರ ಸಂಜೆ ಸುಮಾರು 5 ಗಂಟೆಗೆ ಕೋಣನಕುಂಟೆ ಕ್ರಾಸ್ ಬಳಿ ಪ್ರಹ್ಲಾದ್ ಬಂದಿದ್ದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಗಲಾಟೆ ಮಾಡಿಕೊಂಡಿದ್ದಾರೆ. ಕೋಪಗೊಂಡ ಸಿದ್ಧಾರ್ಥ್ ತನ್ನ ಲೆಸನ್ಸ್ ರಿವಾಲ್ವರ್ ನಿಂದ ಗುಂಡು ಹಾರಿಸಿದ್ದಾನೆ. ಪರಿಣಾಮ ಗುಂಡು ಪ್ರಹ್ಲಾದ್‍ನ ತಲೆಗೆ ತಗುಲಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಪ್ರಹ್ಲಾದ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಸಿದ್ದಾರ್ಥ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ 307ರ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಿದ್ಧಾರ್ಥ್ ಬಂಧನಕ್ಕಾಗಿ ಪೊಲೀಸರು ಬಲೆ ಬಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *