ನವದೆಹಲಿ: ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) 1991 ಕಾಯಿದೆಯ ಕೆಲವು ಭಾಗಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಮಥುರಾ ಮೂಲದ ಧಾರ್ಮಿಕ ಗುರು ದೇವಕಿನಂದನ್ ಠಾಕೂರ್ ಈ ಅರ್ಜಿಯನ್ನು ಇಂದು ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ 1991ರ ಕಾಯಿದೆಯು, ಜಾತ್ಯಾತೀತ ತತ್ವಗಳನ್ನು ಉಲ್ಲಂಘಿಸುತ್ತದೆ. ಅಲ್ಲದೇ ಕಾಯಿದೆಯ 2,3,4ರ ಭಾಗವೂ ಆರ್ಟಿಕಲ್ 14, 15 ಮತ್ತು 21 ಅನ್ನು ಅಪರಾಧ ಎಂದು ವ್ಯಾಖ್ಯಾನಿಸುತ್ತದೆ. ಇನ್ನು ಆರ್ಟಿಕಲ್ 25, 26, 29 ಮತ್ತು ಸಂವಿಧಾನದ ಪೀಠಿಕೆ, ಮೂಲಭೂತ ರಚನೆಯ ಅವಿಭಾಜ್ಯ ಅಂಗವಾದ ಜಾತ್ಯತೀತ ಮತ್ತು ಕಾನೂನಿನ ನಿಯಮದ ತತ್ವಗಳನ್ನು ಉಲ್ಲಂಘಿಸುತ್ತದೆ. ಇದನ್ನೂ ಓದಿ: ಡಿಕೆಶಿ ವಿರುದ್ಧ ಇಡಿ ಕೇಸ್ – ವಿಚಾರಣೆ ಮೇ 31ಕ್ಕೆ ಮುಂದೂಡಿಕೆ

ಶ್ರೀಕೃಷ್ಣನ ಜನ್ಮಸ್ಥಳವನ್ನು ಮರುಸ್ಥಾಪಿಸಲು ಹಿಂದೂಗಳು ನೂರಾರು ವರ್ಷಗಳಿಂದ ಶಾಂತಿಯುತ ಸಾರ್ವಜನಿಕ ಆಂದೋಲನವನ್ನು ನಡೆಸುತ್ತಿದ್ದಾರೆ. ಆದರೆ ಕಾಯಿದೆಯು ಅಯೋಧ್ಯೆಯ ಶ್ರೀರಾಮನ ದೇವಸ್ಥಾನ ಹೊರತುಪಡಿಸಿದೆ. ಆದರೆ ಮಥುರಾದ ಶ್ರೀಕೃಷ್ಣ ಜನ್ಮಸ್ಥಳವನ್ನು ಹೊರತುಪಡಿಸಿಲ್ಲ. ಈ ಎರಡು ಭಗವಾನ್ ವಿಷ್ಣುವಿನ ಅವತಾರಗಳು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

ವಕೀಲ ಅಶ್ವಿನಿ ಉಪಾಧ್ಯಾಯ, ವಾರಣಾಸಿ ನಿವಾಸಿಗಳಾದ ರುದ್ರ ವಿಕ್ರಮ್, ಧಾರ್ಮಿಕ ಮುಖಂಡರಾದ ಜೀತೇಂದ್ರನಂದಾ ಸರಸ್ವತಿ ಈಗಾಗಲೇ ಕಾಯಿದೆಯ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲ ಅರ್ಜಿಗಳಲ್ಲಿ ಸೆಕ್ಷನ್ 2, 3 ಮತ್ತು 4 ನ್ಯಾಯಾಲಯವನ್ನು ಸಂಪರ್ಕಿಸುವ ಅಧಿಕಾರವನ್ನು ಕಸಿದುಕೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ – ಉತ್ತರಾಖಂಡದ ಮಾಜಿ ಸಚಿವ ರಾಜೇಂದ್ರ ಬಹುಗುಣ ಆತ್ಮಹತ್ಯೆ
1991ರ ಕಾಯಿದೆಯು ಸ್ವಾತಂತ್ರ್ಯದ ಬಳಿಕ ಧಾರ್ಮಿಕ ಮತ್ತು ಪೂಜಾ ಸ್ಥಳಗಳು ಯಥಾಸ್ಥಿತಿಯಲ್ಲಿರಬೇಕು, ಅವುಗಳ ರಚನೆಯಲ್ಲಿ ಬದಲಾವಣೆ ತರುವಂತಿಲ್ಲ ಎಂದು ಹೇಳಿತ್ತು. ಇದೇ ಅಂಶವನ್ನು ಆಧರಿಸಿ ವಾರಣಾಸಿಯ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ಜಿಲ್ಲಾ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದು, ಇದೇ ನಿಯಮ ಶ್ರೀಕೃಷ್ಣ ಜನ್ಮಸ್ಥಳ ವಿವಾದಕ್ಕೂ ಅನ್ವಯಸಲಿದೆ. ಈ ಹಿನ್ನಲೆ ಸರಣಿ ಅರ್ಜಿಗಳನ್ನು ಹಿಂದೂ ಪರ ವಕೀಲರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದಾರೆ.

Leave a Reply